Connect with us

    LATEST NEWS

    ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – 6 ಮಂದಿ ಬಂಧನ

    ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಕೊಲೆ ಪ್ರಕರಣ – 6 ಮಂದಿ ಬಂಧನ

    ಮಂಗಳೂರು ಡಿಸೆಂಬರ್ 28: ಡಿಸೆಂಬರ್ 25 ರಂದು ನಡೆದ ಮೆಲ್ರಿಕ್ ಅಂತೋನಿ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

    ಡಿಸೆಂಬರ್ 25 ರಂದು ಮಂಗಳೂರಿನ ಗೋರಿಗುಡ್ಡೆ ಮೆಲ್ರಿಕ್ ಡಿಸೋಜಾ ಮನೆಯಲ್ಲಿ ಐವರು ದುಷ್ಕರ್ಮಿಗಳ ತಂಡ ದಾಳಿ ನಡೆಸಿ ಮೆಲ್ರಿಕ್ ಡಿಸೋಜಾ ಅವರನ್ನು ಕೊಲೆ ಮಾಡಿತ್ತು. ಈ ಸಂಬಂದ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳು ನಿಶಾಕ್ ಪೂಜಾರಿ, ವಿನೇಶ್ ಕುಮಾರ್ , ಸಚಿನ್ ಶೆಟ್ಟಿ, ಗಣೇಶ್ ಕುಲಾಲ್, ಪ್ರವೀಣ್ ಪೂಜಾರಿ, ಸಂದೀಪ್ ಶೆಟ್ಟಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂಗ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ, 2 ಮೋಟಾರ್ ಸೈಕಲ್ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಹಳೆಯ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ನಿಶಾಕ್ ಪೂಜಾರಿ ಹಾಗೂ ಮೆಲ್ರಿಕ್ ಡಿಸೋಜಾ ನಡುವೆ ಇದ್ದ ಹಳೆಯ ದ್ವೇಷವೇ ಈ ಕೊಲೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply