Connect with us

    DAKSHINA KANNADA

    ಮುಲ್ಕಿ ನಗರಪಂಚಾಯತ್ ಗುತ್ತಿಗೆದಾರನ ಮನೆ ಮೇಲೆ ಭೂಗತ ಪಾತಕಿಗಳ ಶೂಟೌಟ್

    ಮುಲ್ಕಿ ನಗರಪಂಚಾಯತ್ ಗುತ್ತಿಗೆದಾರನ ಮನೆ ಮೇಲೆ ಭೂಗತ ಪಾತಕಿಗಳ ಶೂಟೌಟ್

    ಮಂಗಳೂರು ಡಿಸೆಂಬರ್ 23: ಮಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಮಂಗಳೂರಿನ ಹೊರವಲಯದಲ್ಲಿ ಉದ್ಯಮಿ ಮನೆ ಮೇಲೆ ದುಷ್ಕರ್ಮಿಗಳು ಶೂಟೌಟ್ ನಡೆಸಿದ್ದಾರೆ.

    ಮಂಗಳೂರು ಹೊರವಲಯದ ಮುಲ್ಕಿಯ ಪಡು ಪಣಂಬೂರಿನಲ್ಲಿ ಈ ಘಟನೆ ನಡೆದಿದ್ದು, ಮುಲ್ಕಿ ನಗರ ಪಂಚಾಯತ್ ಗುತ್ತಿಗೆದಾರ ನಾಗರಾಜ್ ಎಂಬವರ ಮನೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

    ಬೈಕಿನಲ್ಲಿ ಬಂದ ಇಬ್ಬರು ನಾಗರಾಜ್ ಅವರ ಮನೆ ಬಾಗಿಲಿಗೆ ಮತ್ತು ಕಾರಿಗೆ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಭೂಗತಪಾತಕಿ ಕಲಿ ಯೋಗಿಶ್ ಸಹಚರ ಕೃತ್ಯ ಎಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply