Connect with us

    ಮುಂಬಯಿಯಲ್ಲಿ ಕೇಸರಿ ಕಲರವ

    ಮುಂಬಯಿ ಅಗಸ್ಟ್ 10 : ಸರಕಾರಿ ಉದ್ಯೋಗ ಮತ್ತು ಕಾಲೇಜು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಬುಧವಾರ ಮಹಾರಾಷ್ಟ್ರದ ಮರಾಠ ಸಮುದಾಯ ಮುಂಬಯಿಯ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಸಿತು. ಇದರಲ್ಲಿ ಕೇಸರಿ ಬಾವುಟ ಹಿಡಿದುಕೊಂಡ ಸುಮಾರು 9 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

    ಇಡೀ ಆಜಾದ್ ಮೈದಾನ ಕೇಸರಿಮಯವಾಗಿತ್ತು. ಮರಾಠ ಸಮುದಾಯದ ಈ ಬಲ ಪ್ರದರ್ಶನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಣಿದಿದ್ದು, ಮುಖ್ಯ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

    ಶಿಕ್ಷಣದಲ್ಲಿ ಇತರ ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಮರಾಠರಿಗೂ ವಿಸ್ತರಿಸುವುದಾಗಿ ಹಾಗೂ ಭೂಮಿ ನೀಡುವುದಾಗಿಯೂ ಫಡ್ನವೀಸ್ ಆಶ್ವಾಸನೆ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಈ ಪ್ರತಿಭಟನೆ ಯಶಸ್ವಿಯಾಗಿದ್ದು, ಇದು ಈ ವರ್ಷ ಮರಾಠ ಸಮುದಾಯ ನಡೆಸಿದ 58 ನೇ ಪ್ರತಿಭಟನಾ ಸಮಾವೇಶವಾಗಿತ್ತು.

    ಪ್ರತಿಭಟನೆ ಶಾಂತಿಯುತವಾಗಿ ನಡೆಯಿತಾದರೂ, ಪ್ರತಿಭಟನೆಯಿಂದ ಇಡೀ ಮುಂಬಯಿ ನಗರದಲ್ಲಿ 9 ಗಂಟೆಗೂ ಮಿಕ್ಕಿ ಟ್ರಾಫಿಕ್ ಜಾಮ್ ಆಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply