Connect with us

    ಬಾಳೆ ಹಣ್ಣು : ನಾಲ್ಕು ಹೆಚ್ಚು ತಿನ್ನಿರಿ

    Banna1. ಬಾಳೆಹಣ್ಣಲ್ಲಿ ಟ್ರಿಪ್ಟೋಫಾನ್ ಎಂಬ ಅಮೀನೋ ಆಸಿಡ್ ಮತ್ತು ವಿಟಮಿನ್ ಬಿ-6 ಇರುತ್ತವೆ. ಇವೆರಡೂ ಸೇರಿ ನಮ್ಮ ದೇಹದಲ್ಲಿ ಸೆರಟೋನಿನ್ ಅನ್ನುವ ಕೆಮಿಕಲ್ ಹೆಚ್ಚಿಸುತ್ತದೆ. ಇದರಿಂದ ಖಿನ್ನತೆ, ಬೇಜಾರು, ಮುಂತಾದವೆಲ್ಲ ಕಡಿಮೆಯಾಗುತ್ತವೆ. ಈ ಸೆರಟೋನಿನ್ ಮಾತ್ರೆಗಳೂ ಈಗ ಸಿಗುತ್ತವೆ. ಆದರೆ ನೇರವಾಗಿ ಬಾಳೆಹಣ್ಣು ತಿನ್ನುವುದೇ ಒಳ್ಳೇದು ಅಂತ ಡಾಕ್ಟರುಗಳೂ ಒಪ್ತಾರೆ. 🍌

    2. ಬಾಳೆಹಣ್ಣು ದೇಹಕ್ಕೆ ಬಹಳ ಶಕ್ತಿ ಕೊಡುತ್ತೆ. ಎರಡೇ ಎರಡು ತಿಂದರೆ ಸಾಕು, 90 ನಿಮಿಷ ಜಿಮ್ಮಲ್ಲಿ ಕಸರತ್ತು ಮಾಡಕ್ಕೆ ಬೇಕಾಗುವಷ್ಟು ಶಕ್ತಿ ಸಿಗುತ್ತೆ. ಕೋತಿಗಳಿಗೆ ಎಷ್ಟು ಶಕ್ತಿ ಇದೆ ಅಂತ ಗೊತ್ತು ತಾನೆ? 🍌

    3. ಹಿಂದಿನ ದಿನ ಕುಡಿದಿದ್ದರೆ ಬೆಳಗ್ಗೆ ಬಾಳೆಹಣ್ಣು ತಿನ್ನೋದರಿಂದ ಕುಡಿತದ ಅಮಲು ಕಡಿಮೆಯಾಗುತ್ತೆ. ಯಾಕಂದ್ರೆ ಅದರಲ್ಲಿ ಪೊಟಾಸಿಯಂ ಇರುತ್ತದೆ.

    4. ಮನುಷ್ಯನ DNAಗೂ ಬಾಳೆಹಣ್ಣಿನ DNAಗೂ 50% ಸಾಮ್ಯತೆ ಇರುತ್ತಂತೆ! ಯಾರಿಗಾದರೂ ಬಾಳೆಹಣ್ಣು ಕೊಟ್ಟರೆ ಅದರಲ್ಲಿ ನಮ್ಮ ಅಂಶವೂ ಇರುತ್ತೆ ಅಂತ ಆಯಿತು!

    5. ದೇಹದಲ್ಲಿ ಪೊಟಾಸಿಯಂ ಮಟ್ಟ ಮಿತಿಮೀರಿ ಮನುಷ್ಯ ಸಾಯಕ್ಕೆ 480 ಬಾಳೆಹಣ್ಣು ತಿನ್ನಬೇಕಾಗುತ್ತೆ. ಅಂದರೆ ಎಂತೆಂಥಾ ಹೊಟ್ಟೇಬಾಕರಿಗೂ ಬಾಳೆಹಣ್ಣಿಂದ ಏನೂ ಆಗಲ್ಲ, ಎಷ್ಟು ತಿಂದರೂ ತೊಂದರೆ ಇಲ್ಲ ಅಂತ ಅರ್ಥ

    6. ನೈಸರ್ಗಿಕವಾಗಿ ಜೀವನದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಒತ್ತಡದಿಂದ ಆಗುವ ಎಲ್ಲಾ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೂ ಇದು ಸಿದ್ಧೌಷಧ. ಅದಕ್ಕೇ ಬಾಳೆಹಣ್ಣು ಪ್ರಪಂಚದಲ್ಲೆಲ್ಲ ಜನ ಇಷ್ಟ ಪಟ್ಟು ತಿನ್ನೋದು. 🍌

    7. ಬಾಳೆಹಣ್ಣಲ್ಲಿ ಒಂದು ಚೂರೂ ಕೊಬ್ಬು, ಸೋಡಿಯಂ ಅಥವಾ ಕೊಲೆಸ್ಟ್ರಾಲ್ ಇರೋದಿಲ್ಲ. ಬದಲಾಗಿ ನಾರಿನಂಶ, ವಿಟಮಿನ್ ಸಿ ಮತ್ತು ಬಿ-6, ಪೊಟಾಸಿಯಂ ಮತ್ತು ಮ್ಯಾಂಗನೀಸ್ ಇರುತ್ತವೆ. ಎಂದರೆ ಬಹಳ ಒಳ್ಳೇದು ಅಂತ ಅರ್ಥ!

    8. ಬಾಳೆಹಣ್ಣು ತಿನ್ನೋದರಿಂದ ಹೃದಯಾಘಾತ, ಲಕ್ವಾ ಹೊಡೆಯುವುದು, ಕ್ಯಾನ್ಸರ್ ಬರುವುದು – ಇವೆಲ್ಲದರ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಯಾಕೆ ಕಾಯ್ತಿದೀರಿ? ಬೇರೆಬೇರೆ ರೀತಿಯಲ್ಲಿ ಈ ಹಣ್ಣು ತಿನ್ನೋ ಪ್ರಯೋಗಗಳನ್ನ ಮಾಡಿ!

    9. ಬಾಳೆಹಣ್ಣಲ್ಲಿ 75% ನೀರು ತುಂಬಿರುತ್ತದೆ! ಗೊತ್ತಾಗುವುದೇ ಇಲ್ಲ, ಅಲ್ಲವಾ?

    10. ಪ್ರಪಂಚದ 100ಕ್ಕಿಂತ ಹೆಚ್ಚು ದೇಶಗಳಲ್ಲಿ ಬಾಳೆಹಣ್ಣು ಬೆಳೆಯುತ್ತದೆ. ಸುಮಾರು 300 ಬೇರೆಬೇರೆಯ ತಳಿಗಳು ಸಿಗುತ್ತವೆ.

    11. ಬಾಳೆಗಿಡ ನಿಜಕ್ಕೂ ಒಂದು ಗಿಡ. 20-25 ಅಡಿ ಎತ್ತರ ಬೆಳೆದರೂ ಇದನ್ನ ಮರ ಅನ್ನೋದಕ್ಕೆ ಆಗಲ್ಲ, ಯಾಕಂದರೆ ಬೇರೆ ಮರದಂತೆ ಇದಕ್ಕೆ ಮರದ ಕಾಂಡ ಇರೋದಿಲ್ಲ, ದಿಂಡಿರುತ್ತದೆ. ಅಷ್ಟೇ ಅಲ್ಲ, ಈ ದಿಂಡನ್ನು ಕೂಡ ನಾವು ತಿನ್ತೀವಿ.

    12. ಬಾಳೆ ಎಲೆ ಮೇಲೆ ಊಟ ಮಾಡುವುದರಿಂದ ಮೇಲಿನ ಹಲವು ಒಳ್ಳೆಯ ಅಂಶಗಳ ಲಾಭ ಪಡೆದುಕೊಳ್ಳಬಹುದು 🍌

    Share Information
    Advertisement
    Click to comment

    You must be logged in to post a comment Login

    Leave a Reply