Connect with us

    LATEST NEWS

    ಪಿಎಫ್ಐ ನಿಶೇಧಕ್ಕೆ ಭಜರಂಗದಳ ಪಟ್ಟು, ತಪ್ಪಿದ್ದಲ್ಲಿ ಹೋರಾಟದ ಎಚ್ಚರಿಕೆ..

    ಪುತ್ತೂರು,ಅಗಸ್ಟ್17: ರಾಜ್ಯದಲ್ಲಿ ನಡೆದ ಹಲವು ಹಿಂದೂ ಮುಖಂಡರ ಹತ್ಯೆಯಲ್ಲಿ ಶಾಮೀಲಾದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳನ್ನು ಕೂಡಲೇ ನಿಶೇಧ ಮಾಡಬೇಕೆಂದು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಒತ್ತಾಯಿಸಿದೆ. ಪುತ್ತೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ ರಾಜ್ಯದಲ್ಲಿ ನಡೆದ ರುದ್ರೇಶ್ ಹತ್ಯೆ ಪ್ರಕರಣ ಸೇರಿದಂತೆ ಇತ್ತೀಚೆಗೆ ನಡೆದ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲೂ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಅದರ ಅಂಗಸಂಸ್ಥೆಗಳ ಕೈವಾಡವಿದ್ದು, ಕೂಡಲೇ ಈ ಸಂಘಟನೆಗಳನ್ನು ನಿಶೇಧಿಸುವಂತೆ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು ಈ ಸಂಬಂಧ ಸಂಘಟನೆಯ ವತಿಯಿಂದ ರಾಜ್ಯಪಾಲರು ಹಾಗೂ ಕೇಂದ್ರ ಗೃಹಖಾತೆಗೂ ಮನವಿ ಸಲ್ಲಿಸಲಾಗಿದೆ ಎಂದರು.

     ಜಿಲ್ಲೆಯಲ್ಲಿ ನಡೆದ ಶರತ್ ಕೊಲೆ ಪ್ರಕರಣದಲ್ಲಿ ಜಿಲ್ಲೆಯ ಹಲವು ಪಿಎಫ್ಐ ಸಂಘಟನೆಗೆ ಸೇರಿದ ವ್ಯಕ್ತಿಗಳೂ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಹತ್ಯೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಹಾಗೂ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ ಅವರು ಶರತ್ ಆರೋಪಿಗಳನ್ನು ಬಂಧಿಸಿದ ದಕ್ಷಿಣಕನ್ನಡ ಜಿಲ್ಲಾ ಪೋಲೀಸರನ್ನು ಅಭಿನಂಧಿಸುವುದಾಗಿಯೂ ಹೇಳಿದರು. ಸರಣಿ ಹತ್ಯೆಗಳ ಮೂಲಕ ಕರ್ನಾಟಕದಲ್ಲೂ ಕೇರಳದ ಮಾದರಿಯ ಕೊಲೆಗಳನ್ನು ನಡೆಸಲು ಪಿಎಫ್ಐ ಹಾಗೂ ಅದರ ಅಂಗಸಂಸ್ಥೆಗಳು ತಯಾರಿ ನಡೆಸಿದ್ದು, ಇದಕ್ಕೆ ಸಂಘಪರಿವಾರ ಅವಕಾಶ ನೀಡುವುದಿಲ್ಲ ಎಂದ ಅವರು ಪಿಎಫ್ಐ ನಿಶೇಧ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನು ಒಂದು ತಿಂಗಳೊಳಗೆ ಪ್ರಕ್ರಿಯೆ ಆರಂಭಿಸದೇ ಹೋದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲು ಸಂಘಟನೆ ತೀರ್ಮಾನಿಸಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply