Connect with us

    ಪವರ್‌ಫುಲ್ ಮನೆಮದ್ದು ನಿಮಿಷದಲ್ಲಿ ಪರಿಹಾರ

    ಪವರ್‌ಫುಲ್ ಮನೆ ಔಷಧಿಗಳು-ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ

    ಅತಿಯಾದ ಹಲ್ಲುನೋವಿಗೆ ಪ್ರಮುಖವಾಗಿ ಹಲ್ಲಿನ ಬುಡದಲ್ಲಿ ಆದ ಸೋಂಕು ಕಾರಣವಾಗಿದೆ. ಪಲ್ಪ್ ಎಂದು ಕರೆಯಲಾಗುವ ಈ ಭಾಗದಲ್ಲಿ ಅತಿ ಹೆಚ್ಚಿನ ನರಾಗ್ರಗಳಿದ್ದು ಇವು ಅತಿ ಸಂವೇದನಾಶೀಲವಾಗಿರುತ್ತವೆ. ಬನ್ನಿ ಈ ನೋವನ್ನು ಕಡಿಮೆಗೊಳಿಸಲು ಕೆಲವು ಮನೆಮದ್ದುಗಳಿದ್ದು ಈ ಲೇಖನದಲ್ಲಿ ತಿಳಿಸಿದ್ದೇವೆ,

    ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.

    ಉಪ್ಪು ಮತ್ತು ಕಾಳುಮೆಣಸು

    *ಒಂದು ಬೋಗುಣಿಯಲ್ಲಿ ಸಮಪ್ರಮಾಣದಲ್ಲಿ ಉಪ್ಪು ಮತ್ತು ಕಾಳುಮೆಣಸು ಬೆರೆಸಿ ಕೆಲವು ಹನಿ ನೀರು ಸೇರಿಸಿ ದಪ್ಪನೆಯ ಲೇಪನ ತಯಾರಿಸಿ
    *ಈ ಲೇಪನವನ್ನು ನೋವು ಕೊಡುತ್ತಿರುವ ಭಾಗದ ಮೇಲೆ ಹಚ್ಚಿ ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಬಾಯಿಯನ್ನು ಮುಕ್ಕಳಿಸಿ ಉಗಿಯಿರಿ.
    *ಈ ವಿಧಾನವನ್ನು ದಿನಕ್ಕೆ ಎರಡು ಬಾರಿಯಂತೆ ನೋವು ಕಡಿಮೆಯಾಗುವವರೆಗೆ ಮುಂದುವರೆಸಿ.

    ಹಸಿ ಬೆಳ್ಳುಳ್ಳಿ

    ಇದರ ಪ್ರತಿಜೀವಕ ಮತ್ತು ಔಶಧೀಯ ಗುಣಗಳು ಹಲ್ಲುನೋವನ್ನು ಕಡಿಮೆಗೊಳಿಸಲು ಶಕ್ತವಾಗಿವೆ.
    *ಹಸಿ ಬೆಳ್ಳುಳ್ಳಿ ಜಜ್ಜಿ ಅಥವಾ ಪುಡಿಯನ್ನು ಉಪಯೋಗಿಸಿ ಕೊಂಚ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಕೊಂಚ ನೀರು ಸೇರಿಸಿ ದಪ್ಪನೆಯ ಲೇಪನವನ್ನಾಗಿಸಿ.
    *ಈ ಲೇಪನವನ್ನು ಬಾಧಿತ ಹಲ್ಲಿನ ಮೇಲೆ ಇರಿಸಿ. ಸಾಧ್ಯವಾದರೆ ಹಸಿ ಬೆಳ್ಳುಳ್ಳಿಯ ಎಸಳನ್ನು ಬಾಧಿತ ಹಲ್ಲಿನ ಮೇಲೆ ಇಟ್ಟು ಜಗಿಯಿರಿ.
    *ಈ ವಿಧಾನವನ್ನು ದಿನಕ್ಕೆರಡು ಬಾರಿಯಂತೆ ಕೆಲವು ದಿನ ಅನುಸರಿಸಿ.

    ಲವಂಗ

    *ಎರಡು ಲವಂಗಗಳನ್ನು ನುಣ್ಣಗೆ ಅರೆದು ಕೊಂಚ ಆಲಿವ್ ಎಣ್ಣೆ ಅಥವಾ ಬೇರಾವುದಾದರೂ ಅಡುಗೆ ಎಣ್ಣೆ ಬೆರೆಸಿ ಸೋಂಕು ತಗುಲಿದ ಭಾಗಕ್ಕೆ ಹಚ್ಚಿ
    *ಪರ್ಯಾಯವಾಗಿ ಹತ್ತಿಯುಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗದಲ್ಲಿರಿಸಿ ಕಚ್ಚಿಕೊಳ್ಳಿ.
    *ಇನ್ನೊಂದು ವಿಧಾನದಲ್ಲಿ ಕೊಂಚ ಬಿಸಿನೀರಿಗೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ ಮುಕ್ಕಳಿಸಿ.’ಲವಂಗ’ದ ಜಬರ್ದಸ್ತ್ ಪವರ್ಗೆ ಮೆಚ್ಚಲೇಬೇಕು…

    ಕಹಿ ಬೇವಿನ ಎಲೆ

    ಒ೦ದಿಷ್ಟು ಕಹಿ ಬೇವಿನ ಎಲೆಗಳನ್ನು ಜಜ್ಜಿ ಅದರೆ ರಸಕ್ಕೆ, ಒ೦ದು ಅಥವಾ ಎರಡು ಹನಿಗಳಷ್ಟು ಲಿ೦ಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿ೦ದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲು ನೋವಿನಿಂದ ಮುಕ್ತಿ ಪಡೆಯಬಹುದು. ಫಲಿತಾ೦ಶವು ಗಮನಾರ್ಹವಾಗಿ ಕ೦ಡುಬರುವ೦ತಾಗಲು ಈ ಪ್ರಕ್ರಿಯೆಯನ್ನು ದಿನಕ್ಕೊ೦ದು ಬಾರಿ ಕೈಗೊಳ್ಳಿರಿ.

    ಆಲಿವ್ ಎಣ್ಣೆ

    ಬಳಸಿ ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ

    ತೆಂಗಿನೆಣ್ಣೆ

    ವಿಪರೀತವಾದ ಹಲ್ಲು ನೋವಿಗೆ ಇದು ಸಹ ಒಂದು ಪ್ರಯೋಜನಕಾರಿ ಮನೆ ಪರಿಹಾರವಾಗಿದೆ. ಇದಕ್ಕೆ ನಿಮಗೆ ಅಗತ್ಯವಾಗಿರುವುದು ಕೇವಲ ತೆಂಗಿನೆಣ್ಣೆ. ಒಂದು ಚಮಚ ತೆಂಗಿನೆಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಳ್ಳಿ. 30 ನಿಮಿಷಗಳ ಕಾಲ ಬಾಯಿಯಲ್ಲಿ ಇದನ್ನು ಹಾಕಿಕೊಂಡು ಆಗಾಗ ಮುಕ್ಕುಳಿಸುತ್ತ ಇರಿ. ನಂತರ ಇದನ್ನು ಉಗಿದು ಬಾಯಿಯನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಖಂಡಿತ ನಿಮ್ಮ ಸಮಸ್ಯೆಯಿಂದ ಸ್ವಲ್ಪ ನಿರಾಳತೆಯನ್ನು ಅನುಭವಿಸುವಿರಿ.

    Share Information
    Advertisement
    Click to comment

    You must be logged in to post a comment Login

    Leave a Reply