Connect with us

    LATEST NEWS

    ನಿದ್ದೆಯ ಮಂಪರಿನಲ್ಲಿ ಸರ್ಕಾರಿ ಬಸ್ ದುರ್ಘಟನೆ ,ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಯಾಣಿಕರು ಪಾರು

    ಸುಳ್ಯ ಅಗಸ್ಟ್ 23 : ಸುಳ್ಯ, ಆಗಸ್ಟ್ 23 : ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಕಂಪೌಂಡ್ ಗೆ ಸರ್ಕಾರಿ ಬಸ್ ನುಗ್ಗಿದ ಘಟನೆ ಇಂದು ಬೆಳಗ್ಗಿನ ಜಾವಾ ಸುಳ್ಯದಲ್ಲಿ ಸಂಭವಿಸಿದೆ. ಇಲ್ಲಿನ ಅರಂಬೂರು ಎಂಬಲ್ಲಿ ಈ ಘಟನೆ ನಡೆದಿದ್ದು ಬಸ್ ನುಗ್ಗಿದ ಪರಿಣಾಮ ಸಂಶುದ್ದೀನ್ ಎಂಬವರಿಗೆ ಸೇರಿದ ಮನೆಯ ಕಂಪೌಡ್ ಕುಸಿದು ಹಾನಿ ಸಂಭವಿಸಿದೆ. ಈ ಸ್ಲೀಪರ್ ಕೋಚ್  ಬಸ್ ಮೈಸೂರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದು ಎನ್ನಲಾಗಿದ್ದು, ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ, ನಿದ್ದೆಯ ಮಂಪರಿನಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯಗಳಾಗಿಲ್ಲ ಆದರೆ ಕೆಲವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಸುಳ್ಯ ಪೋಲಿಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply