Connect with us

    LATEST NEWS

    ಚುನಾವಣೆ ಸಂದರ್ಭ ಅಕ್ರಮಗಳಿಗೆ ಅವಕಾಶವಿಲ್ಲ : ಜಿಲ್ಲಾಧಿಕಾರಿ ಸೆಂಥಿಲ್ 

    ಚುನಾವಣೆ ಸಂದರ್ಭ ಅಕ್ರಮಗಳಿಗೆ ಅವಕಾಶವಿಲ್ಲ : ಜಿಲ್ಲಾಧಿಕಾರಿ ಸೆಂಥಿಲ್ 

    ಮಂಗಳೂರು, ಮಾರ್ಚ್ 27 : ಈ ಬಾರಿಯ ಲೋಕಸಭಾ ಚುನಾವಣೆ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಮಾಡಿದೆ.

    ಅಕ್ರಮ ಕಾನೂನು ಬಾಹಿರ ಯಾವುದೇ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಸಸಿಕಾಂತ ಸೆಂಥಿಲ್ ಹೇಳಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ನೀಢಿದ ಅವರು ಚುನಾವಣೆಯ ಪ್ರಕ್ರೀಯೆಗಳಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ನೀತಿ ಸಂಹಿತೆಯಡಿ 8 ಲಕ್ಷ್ಕ್ಕೂ ಅಧಿಕ ನಗದು ಮುಟ್ಟುಗೋಲು ಹಾಕಿದ್ದು, 77 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.

    ಅಲ್ಲದೆ 1 ಸ್ಕೂಟರ್, 2 ಲಾರಿ, 220 ಭಿತ್ತಿ ಪತ್ರ, 2 ಮಾರುತಿ ಕಾರು, 1 ಟ್ರಕ್, ಮತ್ತಿ 1 ಟ್ಯಾಂಕರ್ ಸೇರಿ 73 ಲಕ್ಷ ರೂಪಾಯಿ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಡಿ 266 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರು ಮತ್ತು ಇತರೆ ಸೇರಿ 16,97, 617 ಮತದಾರರು ಇದ್ದಾರೆ. ಇವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ 1861 ಮತಗಟ್ಟೆಗಳನ್ನು ಗುರುತಿಸಲಾಗಿದೆ,

    ಇದರಲ್ಲಿ 640 ಸೂಕ್ಷ್ಮಾ ಮತ್ತು 1221 ಮತಗಟ್ಟೆಗಳನ್ನು ಸಾಧಾರಣ ಮತಗಟ್ಟೆಗಳೆಂದು ವಿಂಗಡಿಸಲಾಗಿದೆ.

    ಮತದಾರರು ಗುರುತಿನ ಚೀಟಿ ಇಲ್ಲದೇಯೂ ಬದಲಿ ದಾಖಲೆಗಲಾದ ಪಾಸ್ ಪೊರ್ಟ್ , ಡ್ರೈವಿಂಗ್ ಲೈಸೆನ್ಸ,ಅಂಚೆ ಕಛೇರಿ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಯ ಯಾವುಧೇ ಭಾವಚಿತ್ರವಿರುವ ಪಾಸ್ ಪುಸ್ತಕ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಹೀಗೆ ಚುನಾವಣಾ ಆಯೋಗ ನಿದಿಪಡಿಸಿದ 9 ದಾಖಲೆಗಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಿ ಮತ ಚಲಾಯಿಸಬಹುದಾಗಿದೆ.

    ಚುನಾವಣೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಅಥವಾ ದೂರು ಸಲ್ಲಿಸಲು 1950 ಟಾಲ್ ಪ್ರಿ ನಂಬರ್ ಮತ್ತು ಸಿವಿಜಿಲ್, ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply