Connect with us

    DAKSHINA KANNADA

    ತುಳು ಸಂಘಟಕ ಎಸಿ ಭಂಡಾರಿಗೆ ಒಲಿದ ಅಕಾಡೆಮಿ ಅಧ್ಯಕ್ಷ ಪಟ್ಟ

    ಮಂಗಳೂರು ಅಗಸ್ಚ್ 08: ಸುಮಾರು ಐದು ದಶಕಗಳಿಂದ ತುಳು ಭಾಷೆ ಅಭಿವೃದ್ಧಿಗೆ ವಿವಿಧ ನೆಲೆಗಳಲ್ಲಿ ಶ್ರಮಿಸುತ್ತ ಬಂದಿರುವ ಎಸಿ ಭಂಡಾರಿ ಅವರಿಗೆ ಈ ಬಾರಿಯ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದವರಾದ 74 ವರ್ಷದ ಎಸಿ ಭಂಡಾರಿಯವರು 1970 ರಲ್ಲಿ ಎಸ್ ಆರ್ ಹೆಗ್ಡೆ, ರತ್ನ ಕುಮಾರ್ ಅವರೊಂದಿಗೆ ಮಂಗಳೂರಿನಲ್ಲಿ ತುಳು ಕೂಟವನ್ನು ಸ್ಥಾಪಿಸಿ ತುಳು ಭಾಷೆ ಅಭಿವೃದ್ಧಿ ನಿಟ್ಟಿನಲ್ಲಿ ವೇದಿಕೆಯನ್ನು ಹುಟ್ಟು ಹಾಕಿದ್ದರು. ಅಲ್ಲದೇ ತುಳು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು.
    ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು ತುಳು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯಲ್ಲಿ ಕೈ ಜೋಡಿಸುತ್ತಾ ಬಂದಿದ್ದ ಅವರು ಉಜಿರೆಯಲ್ಲಿ ಜರುಗಿದ ವಿಶ್ವ ತುಳು ಸಮ್ಮೇಳನದ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಮ್ಮೇಳನದ ವಲಯ ಸಮಿತಿಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
    ಕಳೆದ ಬಾರಿ ಕೂಡ ತುಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಭಂಡಾರಿ ಹೆಸರು ಕೇಳಿ ಬಂದಿತ್ತಾದರೂ ಕೊನೆಯ ಹಂತದಲ್ಲಿ ಅದು ಕೈತಪ್ಪಿ ಹೋಗಿತ್ತು. ಹಿರಿಯ ಕಾಂಗ್ರೆಸ್ಸಿಗರಾದ ಎಸ್ಸಿ ಭಂಡಾರಿಯವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಅಧ್ಯಕ್ಷರಾಗಿ ರಾಜ್ಯ ಕಾಂಗ್ರೆಸ್ ಕಿಸಾನ್ ಸೆಲ್ ನ ಸಹ ಅಧ್ಯಕ್ಷರಾಗಿ ಅನೇಕ ಪ್ರಮುಖ ಹೊಣೆಗಾರಿಕೆಗಳು ನಿರ್ವಹಿಸಿದ್ದಾರೆ. ಜಿಲ್ಲಾ ಪಂಚಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ .
    ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ 27 ವರ್ಷಗಳ ಸೇವೆ ಸಲ್ಲಿಸಿದ್ದರು ಪ್ರಗತಿಪರ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply