Connect with us

    DAKSHINA KANNADA

    ಆಳ್ವಾಸ್‍ನಲ್ಲಿ ಕಲರ್ ಪುಲ್ ದೀಪಾವಳಿ

    ಆಳ್ವಾಸ್‍ನಲ್ಲಿ ಕಲರ್ ಪುಲ್ ದೀಪಾವಳಿ

    ಮೂಡುಬಿದಿರೆ ನವೆಂಬರ್ 12: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ `ಆಳ್ವಾಸ್ ದೀಪಾವಳಿ 2017 ಸಾಂಸ್ಕಂತಿಕ ವೈಭವ ನಡೆಯಿತು.

    ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾತೀರ್ಥ ಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು. ಆಳ್ವಾಸ್ ಮುಖ್ಯಸ್ಥ ಡಾ.ಎಂ ಮೋಹನ ಆಳ್ವ, ತುಳುನಾಡಿನ ಸಾಂಪ್ರಾದಾಯಿಕ ತುಳಸೀ ಪೂಜೆ, ಕೃಷಿ ಪರಿಕರಗಳಿಗೆ ಪೂಜೆ, ಸರಸ್ವತಿ ಪೂಜೆ, ಲಕ್ಷ್ಮೀ ಪೂಜೆ, ಗೋಪೂಜೆ ನೆರವೇರಿಸಿದರು. ಕದ್ರಿ ನವನೀತ ಶೆಟ್ಟಿ ಬಲೀಂದ್ರ ಪೂಜೆ ಮಹತ್ವವನ್ನು ತಿಳಿಸಿದರು.

    ಕೇರಳದ ಶೃಂಗಾರಿ ಮೇಳ, ಮೋಹಿನಿಯಾಟ್ಟಂ, ಶ್ರೀರಾಮ ಪಟ್ಟಾಭಿಷೇಕ- ಬಡಗುತಿಟ್ಟು ಯಕ್ಷ ಪ್ರಯೋಗ, ಗೋಟಿಪೂವ-ಒರಿಸ್ಸಾ ಜನಪದ ನೃತ್ಯ. ಅಂಧ್ರದ ಬೆಡಗಿನ ಬಂಜಾರ, ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ದೋಲ್ ಚಲೋ, ಬೋ ಶಂಬೋ ಭರತನಾಟ್ಯ, ಸಾಹಸಮಯ ಮಲ್ಲಕಂಬ, ಗುಜರಾರ್ ರಂಗಿನ ದಾಂಡಿಯಾ ನೃತ್ಯ. 100 ವಿದ್ಯಾರ್ಥಿಗಳ ಡೊಳ್ಳು ಕುಣಿತ, 40 ಸಿಂಹಗಳ-ಸಿಂಹ ಬೇಟೆಯ ಪುರುಲಿಯೋ, ಕಥಕ್ ಪ್ರಹಾರ್, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕತಿಟ್ಟು ಯಕ್ಷಗಾನ -ಅಗ್ರಪೂಜೆ, ಶ್ರೀಲಂಕಾದ ಜನಪದ ನೃತ್ಯ, ಹೆಸರಾಂತ ಕಲಾವಿದ ಪ್ರಹ್ಲಾದ್ ಆಚಾರ್ಯ ಅವರಿಂದ ಶ್ಯಾಡೋ ಪ್ಲೇ, ಶಬರಿ ಗಾಣಿಕ ಅವರಿಂದ ಅತೀ ವೇಗದ ಚಿತ್ರ ರಚನೆ 40 ಸಾವಿರಕ್ಕೂ ಅಧಿಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಮೆರವಣಿಯಲ್ಲಿ ಗೊರಿಲ್ಲಾ ವಿಶೇಷ ಆಕರ್ಷಣೆಯಾಗಿತ್ತು. ಯುರೋಪಿಯನ್‍ನ 20 ಮಂದಿ ಸಾಂಸ್ಕಂತಿಕ ವೈಭವವನ್ನು ವೀಕ್ಷಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply