ಹೆಣ್ಣುಮಕ್ಕಳು ಸ್ನಾನ ಮಾಡುವ ವೀಡಿಯೋ ಮಾಡುತ್ತಿದ್ದ ಖದೀಮ 

ಮಂಗಳೂರು, ಫೆಬ್ರವರಿ 13 : ಹೆಣ್ಣು ಮಕ್ಕಳು ಸ್ನಾನ ಮಾಡುತ್ತಿದ್ದ ವಿಡಿಯೋ ಮಾಡುತ್ತಿದ್ದ ಅಪ್ರಾಪ್ತ ಯುವಕನನ್ನು ಸಾರ್ವಜನಿಕರು ಹೊಂಚು ಹಾಕಿ ಹಿಡಿದಿದ್ದಾರೆ.

ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಪುರದಲ್ಲಿ ಈ ಘಟನೆ ನಡೆದಿದೆ,

ಕೃಷ್ಣಪುರದ ಪರಿಸರದಲ್ಲಿ ಒಬ್ಬಂಟಿಯಾಗಿರುವ ಅಥವಾ ಗಂಡಸರಿಲ್ಲದ ಮನೆಗಳೇ ಇವ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ,

ರಾತ್ತಿ ಹೊತ್ತು ಹೆಣ್ಮಕ್ಕಳು ಸ್ನಾನ ಮಾಡುವಾಗ ಮನೆಯ ಕೌಂಪಂಡನ್ನು ಮೆಲ್ಲನೇ ಹಾರಿ ಬಂದು ಬಾತ್ ರೂಂ ಕಿಟಕಿಯಿಂದ ಮೊಬೈಲ್ ಮೂಲಕ ಚಿತ್ರೀಕರಣ ನಡೆಸುತ್ತಿದ್ದ ಎನ್ನಲಾಗಿದೆ.

ಕೃಷ್ಣಪುರದಲ್ಲಿ ಇಂತಹುದೇ ಮನೆಯಲ್ಲಿ ವಿಡಿಯೋ ಮಾಡಲು ಹೋದಾಗ ಸ್ನಾನಕ್ಕೆ ತೆರಳಿದ್ದ ಮಹಿಳೆ ಜೋರಾಗಿ ಕೂಗಿಕೊಂಡಾಗ ಎಚ್ಚೆತ್ತ ಅಕ್ಕ ಪಕ್ಕದ ಜನ ಓಡಿ ಬಂದು ಈ ಕದೀಮನನ್ನು ರೆಡ್ ಹ್ಯಾಂಡಾಗಿ ಹಿಡಿದು, ಚೆನ್ನಾಗಿ ತದಕಿ ಬಾಯಿ ಬಿಡಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಳೆದ ಅನೇಕ ಸಮಯದಿಂದ ಈ ಕೃತ್ಯವನ್ನು ಮಾಡುತ್ತಿದ್ದ ಎಂದು ಆತ ಬಾಯ್ಬಿಟ್ಟಿದ್ದಾರೆ.

5 Shares

Facebook Comments

comments