ಹಳೆಯಂಗಡಿ : ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಆಶ್ರಯದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಸಂಘಟಕ ಹಾಗೂ ಸಾಮಾಜಿಕ ಚಿಂತಕ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಬೆಳ್ಳಾಯರು ಗ್ರಾಮದ ಸಾಧಕ ಜನಾಬ್ ಬಿ.ಎಂ. ಹನೀಫ್ ಹಾಗೂ ಸಮಾಜ ಸೇವಕ, ಉದ್ಯಮಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್‌ರವರಿಗೆ ‘ಹುಟ್ಟೂರ ಸಮ್ಮಾನ’ ಕಾರ್ಯಕ್ರಮವು ನ.23 ನೇ ಭಾನುವಾರ ಸಂಜೆ ಹಳೆಯಂಗಡಿಯ ಬಿಲ್ಲವ ಭವನದಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ಕದಿಕೆ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬೊಳ್ಳೂರು ಜುಮ್ಮಾ ಮಸೀದಿಯ ಮುದರ್ರಿಸ್ ಬಹು| ಮುಹಮ್ಮದ್ ಶರೀಫ್ ಅರ್ಷದಿ ಮಾತನಾಡಿದರು,
ಕದಿಕೆ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ಲಾ ಝೈನಿ ಬಡಗನ್ನೂರು ಸನ್ಮಾನಿತರಿಗೆ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಅಜೀಜ್, ಹಳೆಯಂಗಡಿ ಅಮ್ಮಾನ್ ಮೆಮೋರಿಯಲ್ ಚರ್ಚ್ ನ ಧರ್ಮ ಗುರು ರೆಫಾ| ಅಮೃತ್ ರಾಜ್ ಖೋಡೆ, ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಕುಡುಂಬೂರು, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್, ಇಂದಿರಾನಗರ ತಖ್ವಾ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಅಬ್ದುಲ್ ಲತೀಫ್ ಲೈಟ್‌ಹೌಸ್, ಸಾಗ್ ಬದ್ರಿಯಾ ಮಸೀದಿ ಅಧ್ಯಕ್ಷ ಜನಾಬ್ ಅಬ್ದುಲ್ ಖಾದರ್ ಸಾಗ್, ತೋಕೂರು ಮಸೀದಿ ಅಧ್ಯಕ್ಷ ಜನಾಬ್ ಅಲ್ತಾಫ್ ಹುಸೇನ್ ಮೆಹೆತಾಬ್, ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಅಶ್ರಫ್ ಪಡು ತೋಟ ಉಪಸ್ಥಿತರಿದ್ದರು.

ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಳೆಯಂಗಡಿ ಬೆಳ್ಳಾಯರು ಗ್ರಾಮದ ಸಾಧಕ ಜನಾಬ್ ಬಿ.ಎಂ. ಹನೀಫ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ ಕೃಷ್ಣ ಕೋಟ್ಯಾನ್ ರವರಿಗೆ ಹುಟ್ಟೂರ ಸಮ್ಮಾನ ಕಾರ್ಯಕ್ರಮ ನೆರವೇರಿತು.
ಬಿಲ್ಲವ ಸಮಾಜ ಸೇವಾ ಸಂಘ ಹಳೆಯಂಗಡಿ (ರಿ) ಇದರ ವತಿಯಿಂದ ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಹಾಗೂ ಭಾಸ್ಕರ್ ಸಾಲಿಯಾನ್, ಉದಯ ಕುಮಾರ್, ಮೋಹನ್ ಎಸ್ ಸುವರ್ಣ, ಜಯ ಸುವರ್ಣ ಹಳೆಯಂಗಡಿ, ಗಣೇಶ್ ಜಿ ಬಂಗೇರ, ರವಿ ಜಿ ಅಮೀನ್, ಹೇಮನಾಥ ಕರ್ಕೇರ ಇವರುಗಳು ಕೂಡ ಉಪಸ್ಥಿತರಿದ್ದು, ರಾಜ್ಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ವೇದಿಕೆಯಲ್ಲಿ ಪುರಸ್ಕೃತರನ್ನು ಸನ್ಮಾನಿಸಿ ಗೌರವಾರ್ಪಣೆ ಮಾಡಿದರು
ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಕಾರ್ಯದರ್ಶಿ ವಾಹಿದ್ ತೋಕೂರು ಸ್ವಾಗತಿಸಿ, ಹ್ಯಾರಿಸ್ ನವರಂಗ್ ಧನ್ಯವಾದ ಅರ್ಪಿಸಿದರು, ಮಯ್ಯದ್ದಿ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.



