Connect with us

LATEST NEWS

ಹತ್ತಾರು ಜನರ ಬದುಕಿನಲ್ಲಿ ಆಪತ್ಭಾಂಧವನಾಗಿ ಬಂದಾತನಿಗೆ ನೆರವು ಬೇಕಿದೆ!

ಕುಂದಾಪುರ, ಅಕ್ಟೋಬರ್ 21: ಹೆರಿಗೆಯ ಸಂದರ್ಭ ,ರಸ್ತೆ ಅಪಘಾತಗಳಾದಾಗ ಮತ್ತು ಯಾವುದೇ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾದಾಗ, ಅಂಥವರಿಗೆ ಆಪತ್ಭಾಂಧವನಾಗಿ ರಕ್ತದಾನ ಮಾಡುತ್ತಿದ್ದ ಶಾಂತರಾಮ್ ಸ್ವತಃ ಸಂಕಷ್ಟದಲ್ಲಿ ಸಿಕ್ಕಿಕೊಂಡಿರುವುದು ವಿಧಿ ವಿಪರ್ಯಾಸ.

ಕುಂದಾಪುರ ತಾಲೂಕಿನ ಬಿದ್ಕಲ್ಕಟ್ಟೆಯ ಶಾಂತರಾಮ ಅವರು ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಜೀವನ ಸಾಗಿಸುತ್ತಿದ್ದವರು. ಇದು ಬಿಟ್ಟರೆ ಅವರಿಗೆ ಬೇರೆ ಯಾವುದೇ ಆದಾಯ ಮೂಲಗಳಿಲ್ಲ. ಇವರ ದುಡಿಮೆಯಿಂದಲೇ ಸಂಸಾರದ ರಥ ಸಾಗುತ್ತಿತ್ತು.ಆದರೆ ಅನೇಕರಿಗೆ ಆಪದ್ಭಾಂಧವನಾಗಿ ನೆರವು ಮಾಡಿದ ಇವರಿಗೆ ವಿಧಿ ಕರುಣೆ ತೋರಲಿಲ್ಲ. ಕೇವಲ 39 ವರ್ಷದ ಸಣ್ಣ ಪ್ರಾಯದಲ್ಲಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಇದೀಗ ಯಾರಾದರೂ ತಮ್ಮ ನೆರವಿಗೆ ಬರಬಹುದಾ ಎಂದು ಎದುರು ನೋಡುವಂತಾಗಿದೆ.

ವಾರಕ್ಕೆರಡು ಬಾರಿ ಮಣಿಪಾಲದ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ತಾಯಿ, ಪತ್ನಿ ಹಾಗೂ 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಗಳಿರುವ ಮನೆಯಲ್ಲಿ, ಇಡೀ ಕುಟುಂಬವು ಇವರೊಬ್ಬರ ಶ್ರಮದಾಯಕ ದುಡಿಮೆಯಿಂದ ಬದುಕು ಸಾಗಿಸಿಕೊಂಡಿದ್ದರು. ಎದುರಾದ ಚಿಂತಾಜನಕ ಪರಿಸ್ಥಿತಿಯಿಂದ ಒಂದು ಬಡ ಕುಟುಂಬವು ನರಕಯಾತನೆಗೆ ತುತ್ತಾಗಿದೆ.

ಶಾಂತಾರಾಮ ಅವರ ಚಿಕಿತ್ಸೆ, ಬದಲಿ ಕಿಡ್ನಿ ಜೋಡಣೆಗೆ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ದೊಡ್ಡ ಮೊತ್ತವನ್ನು ಕ್ರೂಢಿಕರಿಸಬೇಕಾಗಿದೆ ಎಂದು ಶಾಂತರಾಮರು ಹೇಳಿಕೊಂಡಿದ್ದಾರೆ. ಕಡು ಬಡವರಾದ ಇವರು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ಭರಿಸಲಾರರು.

ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು, ಸಹೃದಯಿ ದಾನಿಗಳು, ನಾಗರಿಕ ಸಮಾಜವು ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕಾಗಿದೆ. ಹನಿ ಹನಿ ಸೇರಿ ಹಳ್ಳವಾದಂತೆ ಸಹೃದಯಿಗಳು ನೀಡುವ ಸಣ್ಣ ಸಣ್ಣ ಮೊತ್ತದ ನೆರವು ಶಾಂತರಾಮರು ಮೊದಲಿನಂತಾಗಲು ಸಹಕಾರವಾಗುತ್ತದೆ.ನೆರವು‌ ನೀಡಬಯಸುವವರು

Phone Pay:-  7996729561

ಬ್ಯಾಂಕ್ ಖಾತೆ ವಿವರ:-

Syndicate Bank, Bidkalkatte.

Name:- Shantharam

Account Number:- 01622250002856

IFSC-SYNB0000162