ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ವಿರುದ್ದ ಉಳ್ಳಾದಲ್ಲಿ ಎಸ್‌ಡಿಪಿಐನಿಂದ ಬೃಹತ್ ಪ್ರತಿಭಟನೆ

ಮಂಗಳೂರು, ಫೆಬ್ರವರಿ 06 : : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟಾದ್ಯಂತ ಫೆಬ್ರವರಿ 01ರಿಂದ28ರ ವರೆಗೆ ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿಗಳಿಸೋಣ ಎಂಬ ಘೋಷಣೆಯೊಂದಿಗೆ ರಾಷ್ಟ್ರೀಯ ಅಭಿಯಾನವನ್ನು ಕೈಗೊಂಡಿದ್ದ ಪ್ರಯುಕ್ತ ಉಳ್ಳಾಲದಲ್ಲೂ ಕಾರ್ಯಕ್ರಮ ಸಂಘಟಿಸಿತ್ತು.

ಇದೀಗ ಈ ಕಾರ್ಯಕ್ರಮ ಕೋಮು ಪ್ರಚೋದಕವಾಗಿದೆ ಎಂದು ಪೋಲಿಸ್ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿರುವುದನ್ನು ಖಂಡಿಸಿ ಎಸ್‌ಡಿಪಿಐ ಉಳ್ಳಾಲ ಪೊಲೀಸ್ ಠಾಣೆಯ ಎದುರು ಬೃಹತ್ತ ಪ್ರತಿಭಟನೆ ನಡೆಸಿತು. , ಪೋಲಿಸ್ ‌ಇಲಾಖೆಯು ರಾಜಕೀಯ ಒತ್ತಡಕ್ಕೆ ಮಣಿದು ಸ್ವಯಂಪ್ರೇರಿತವಾಗಿ ಜಿಲ್ಲಾಧ್ಯಕ್ಷರು ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಿಲ್ಲೆಯಲ್ಲಿ ದ್ವೆಷರಾಜಕೀಯ ಹರಡಿಸುವಂತಹ, ಶಾಂತಿ ಕೆಡಿಸುವಂತಹ ಕೆಲಸದಲ್ಲಿ ಪೋಲಿಸರು ನಿರತರಾಗಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಉಸ್ತುವಾರಿ ಸಚಿವರ ಕುಮ್ಮಕ್ಕುನಿಂದಲೇ ಆಡಳಿತ ದುರುಪಯೋಗ ಮಾಡಿಕೊಂಡು ಪೊಲೀಸರ ಮೂಲಕ ಒತ್ತಡ ಹೇರಿ ಈ ರೀತಿಯ ಧ್ವೇಷ ರಾಜಕೀಯವನ್ನು ನಡೆಸಿರುತ್ತಾರೆ ಎಂದು ಆರೋಪಿಸಿದರು.
ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಾರ್ಯಕ್ರಮ ನಡೆಸಲು, ಆಯುಧ ಹಿಡಿದು ಪಥಸಂಚಲನ ನಡೆಸುವಾಗ, ಜಿಲ್ಲೆಗೆ ಬೆಂಕಿ ಕೊಡುವ ಹೇಳಿಕೆ ಕೊಟ್ಟಾಗ, ಕುದ್ರೋಳಿ ಭಯೋತ್ಪಾದನಾ ಕೇಂದ್ರವೆಂದು ಆಪಾದಿಸಿದವರ ಮೇಲೆ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹೇಳಿಕೆ ಕೊಡುವವರ ಮೇಲೆ ಸ್ವಯಂಪ್ರೇರಿತ ಕೇಸು ದಾಖಲಿಸಲು ಪೋಲೀಸರಿಗೆ ಒತ್ತಡ ಹೇರಲು ಉಸ್ತುವಾರಿ ಸಚಿವರಿಗೆ ಯಾಕೆ ಸಾದ್ಯವಾಗಿಲ್ಲ? ಬಹಳ ಮುಖ್ಯವಾಗಿ ಇಸ್ಲಾಮಿನ ಸಂದೇಶವಾಹಕ ಪ್ರವಾದಿ(ಸ)ರವರನ್ನು ನಿಂದನೆ ಮಾಡಿದ ಸುವರ್ಣನ್ಯೂಸ್‌ನ ಅಜಿತ್ ಹನುಮಕ್ಕನವರ್ ಮೇಲೆ ಸರಕಾರಕ್ಕಾಗಲೀ, ಪೋಲೀಸರಿಗಾಗಲೀ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಸಾಧ್ಯವಾಗದಿರುವಾಗ, ಪಕ್ಷಪಾತ ಧೋರಣೆ ಎಂಬಂತೆ ಸ್ವಯಂ ಘೋಷಿತ ಜಾತ್ಯಾತೀತ ನಾಯಕರ ಒತ್ತಡಕ್ಕೆ ಮಣಿದು ಸಾಮಾಜಿಕ ನ್ಯಾಯಪರ ಪಕ್ಷ, ಸಂಘಟಕರ ಮೇಲೆ ಪ್ರಕರಣ ದಾಖಲಿಸಿರುವುದು ನಾಚಿಕೆಗೇಡು ಮತ್ತು ಖಂಡನೀಯವಾಗಿದೆ ಎಂದರು.ಪ್ರತಿಭಟನೆಯ ಮೂಲಕ ಸರಕಾರ ಮತ್ತು ಪೊಲೀಸ್ ಇಲಾಖೆಗೆ ನಾವು ಒತ್ತಾಯ ಮಾಡುತ್ತಿದ್ದೇವೆ. ಜಿಲ್ಲಾಧ್ಯಕ್ಷರ ಮತ್ತು ಇತರರ ಮೇಲೆ ಹಾಕಿದ ಸುಳ್ಳು ಪ್ರಕರಣವನ್ನು ಕೂಡಲೇ ಹಿಂತೆಗೆಯಬೇಕೆಂದು, ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ಮಾತನಾಡಿ ಕೇಸು,ಜೈಲುವಾಸಕ್ಕೆ ಹೆದರುವ ಪಕ್ಷವಲ್ಲ ಎಸ್ ಡಿ ಪಿ ಐ ನ್ಯಾಯದ ಪರ ಯಾವತ್ತೂ ಹೋರಾಟದ ಮುಂಚೂಣಿಯಲ್ಲಿರುವ ಪಕ್ಷವಾಗಿದೆ ಆದುದರಿಂದ ಬಾಬರಿ ಮಸ್ಜಿದ್ ಅಭಿಯಾನದ ಮೂಲಕ ನೈಜ ಇತಿಹಾಸವನ್ನು ದೇಶದಾದ್ಯಂತ ಸಕ್ರೀಯಗೊಳಿಸಲಿದ್ದೇವೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಗೂಡಿನಬಳಿಅಬ್ಬಾಸ್ ಕೀನ್ಯ, ಅಬ್ಬಾಸ್ ಎ.ಆರ್,ಮುನೀಬ್ ಬೆಂಗ್ರೆ, ಝಾಹಿದ್ ಮಲಾರ್, ಸಿದ್ದೀಕ್ ಉಳ್ಳಾಲ, ಲತೀಫ್ ಕೊಡಿಜಾಲ್,ರವೂಫ್ ಉಳ್ಳಾಲ,ನಿಝಾಮ್ ,ಉಳ್ಳಾಲ ನಗರ ಪಂಚಾಯತ್ ಸದಸ್ಯರಾದ ರಮೀಝ್, ಅಸ್ಗರ್ ಆಲಿ ಮತ್ತು ಇತರರು ಉಪಸ್ಥಿತರಿದ್ದರು.

Facebook Comments

comments