ಸುಗಮ ಚುನಾವಣೆಗೆ ಕಾನೂನು ಪಾಲಿಸಿ- ರಾಜೀವ್ ರತನ್

ಮಂಗಳೂರು, ಮಾರ್ಚ್ 27:. ಎಲ್ಲರಿಗೂ ಚುನಾವಣೆಯ ಸದಾಚಾರ ಸಂಹಿತೆ ಬಗ್ಗೆ ಮಾಹಿತಿ ಇದ್ದು ನ್ಯಾಯ ಮತ್ತು ಮುಕ್ತ ಚುನಾವಣೆಗೆ ಪ್ರತಿಯೊಬ್ಬರೂ ಹೊಣೆಗಾರರು ಎಂಬುದನ್ನು ಮನಗಂಡು ಚುನಾವಣಾ ಪ್ರಚಾರ ನಡೆಸಿ. ಯಾವುದೇ ವಿಷಯದ ಬಗ್ಗೆ ಗೊಂದಲ, ದೂರುಗಳಿದ್ದರೆ ಗಮನ ಸೆಳೆಯಲು ಅವಕಾಶವಿದ್ದು ಎಲ್ಲ ಹೊತ್ತಿನಲ್ಲೂ ನಾನು ಪ್ರತಿಯೊಬ್ಬರಿಗೂ ಲಭ್ಯವಿರುತ್ತೇನೆಂದು ಚುನಾವಣಾ ವೀಕ್ಷಕರಾದ ರಾಜೀವ್ ರತನ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಯಲ್ಲಿ ನೀತಿ ಸಂಹಿತೆಯನ್ನೊಳಗೊಂಡಂತೆ ಎಲ್ಲ ಪ್ರಕ್ರಿಯೆಗಳು ಚುನಾವಣಾ ವೆಬ್‍ಸೈಟ್ ನಲ್ಲಿ ಲಭ್ಯವಿದ್ದು ಎಲ್ಲರಿಗೂ ಪಾರದರ್ಶಕವಾಗಿ ಮಾಹಿತಿ ಲಭ್ಯವಿರುತ್ತದೆ.

ಖರ್ಚು ವೆಚ್ಚದ ಬಗ್ಗೆಯೂ ಪ್ರತಿಯೊಬ್ಬ ಅಭ್ಯರ್ಥಿಯು ಸರಿಯಾದ ಮಾಹಿತಿಯನ್ನು ಕೊಡಿ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಲ್ಲಾಧಿಕಾರಿ ವೆಂಕಟಾಚಲಪತಿ, ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.