ಸಿನೆಮಾದಲ್ಲಿ ಅವಕಾಶದ ಆಮೀಷ ನಟಿ ಮೇಲೆ ಲೈಂಗಿಕ ದೌರ್ಜನ್ಯ :ಸ್ವಾಮೀಜಿ ವಿರುದ್ದ ಮಂಗಳೂರಿನಲ್ಲಿ ದೂರು

ಮಂಗಳೂರು, ನವೆಂಬರ್ 24 : ಸಿನೆಮಾದಲ್ಲಿ ಅವಕಾಶ ನೀಡೋದಾಗಿ ಆಸೆಯೊಡ್ಡಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದ ವ್ಯಕ್ತಿಯೋರ್ವನ ಮೇಲೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದಯಾನಂದ ಗುರು ನಂಜೇಶ್ವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಿರು ತೆರೆ ನಟಿ ಕಾವ್ಯ ಆಚಾರ್ಯ ಅವರು ದೂರು ನೀಡಿದ್ದಾರೆ.

ಸ್ವಾಮೀಜಿ‌ ಸೇರಿದಂತೆ ಒಟ್ಟು 5 ಜನರ ವಿರುದ್ಧ ಕಾವ್ಯ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತೀರ್ಥಹಳ್ಳಿಯಲ್ಲಿದ್ದ ಕಾವ್ಯ ಆಚಾರ್ಯಗೆ ಸಿನೆಮಾದಲ್ಲಿ ಅವಕಾಶ ನೀಡೋದಾಗಿ ಪುಸಲಾಯಿದ್ದ ಆರೋಪವನ್ನು ದಯಾನಂದ ಗುರು ನಂಜೇಶ್ವರ ಸ್ವಾಮೀಜಿ ವಿರುದ್ದ ಕಾವ್ಯ ಮಾಡಿದ್ದು, ಬೆಂಗಳೂರಿಗೆ ಕರೆದೊಯ್ಯೊ ಮುನ್ನ ಕಾವ್ಯರನ್ನು ಮಂಗಳೂರಿನ ಹಂಪನಕಟ್ಟೆಯಲ್ಲಿರುವ ತಾಜ್ ಮಹಲ್ ಹೋಟೆಲ್ ‌ ಗೆ ಸ್ವಾಮೀಜಿ ಅವರು ಬರ ಹೇಳಿದ್ದರು ಎಂದು ನಟಿ ಕಾವ್ಯಾ ಅವರು ಆರೋಪಿಸಿದ್ದು, ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ಕಾವ್ಯಳನ್ನು ದಯಾನಂದ ಸ್ವಾಮೀಜಿ ಕರೆದೊಯ್ದಿದ್ದರು.

ಇದೇ ವಿಚಾರವಾಗಿ ಮಂಗಳೂರಿನ‌ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ಬಗ್ಗೆ ತನಿಖೆ ಕದ್ರಿ ಪೊಲೀಸರು ಕೈಗೊಂಡಿದ್ದಾರೆ.

3 Shares

Facebook Comments

comments