LATEST NEWS
ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅವರ ಬಳಿಯೇ ಕೇಳಿ – ದಿನೇಶ್ ಗುಂಡೂರಾವ್
ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಅವರ ಬಳಿಯೇ ಕೇಳಿ – ದಿನೇಶ್ ಗುಂಡೂರಾವ್
ಮಂಗಳೂರು ಅಗಸ್ಟ್ 25: ನಾನು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿದ್ಧರಾಮಯ್ಯ ಹೇಳಿಕೆ ಪೂರ್ತಿ ನೋಡಿಲ್ಲ ಮುಖ್ಯಮಂತ್ರಿಯಾಗಿದ್ದಾಗ ಕೆಲಸ ಮಾಡಿದ್ರೂ ಜನ ಮತ ಹಾಕಿಲ್ಲ ಆ ನಿಟ್ಟಿನಲ್ಲಿ ಹೇಳಿಕೆ ನೀಡಿರಬಹುದು ಎಂದು ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಈಗ ಮುಖ್ಯಮಂತ್ರಿಯಾಗುವ ಇಂಗಿತ ಸಿದ್ದರಾಮಯ್ಯ ಅವರಿಗೆ ಇಲ್ಲ ಆದರೆ ಮುಂದೆ ಏನಾಗುತ್ತೆ ಎಂದು ಗೊತ್ತಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಈ ರೀತಿಯ ಹೇಳಿಕೆ ಬಗ್ಗೆ ಗೊತ್ತಿಲ್ಲ ಎಂದು ಪ್ರಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಬಗ್ಗೆ ಅವರ ಬಳಿಯೇ ಕೇಳಿ ಎಂದರು. ಸಿದ್ದರಾಮಯ್ಯ ಅವರ ಹೇಳಿಕೆ ಗೆ ನೂರಾರು ಅರ್ಥವನ್ನು ಮಾಧ್ಯಮಗಳು ನೀಡಿವೆ ಎಂದರು.