ಬಂಟ್ವಾಳ,ಆಗಸ್ಟ್ 11 : ಪ್ರತಿಭಟನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದ ಪುಟ್ಟ ಬಾಲಕ…!!ಸಂಘಪರಿವಾರದ ಶಾಲೆಗಳಿಗೆ ಅನುದಾನ ಕಟ್, ಈ ಹಿನ್ನೆಲೆಯಲ್ಲಿ ಅನ್ನದ ಬಟ್ಟಲುಗಳೊಂದಿಗೆ ಬೀದಿಗಿಳಿದಿದೆ. ವಿದ್ಯಾರ್ಥಿ ಸಮೂಹ ಬಂಟ್ವಾಳ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಹಾಗೂ ಶ್ರೀದೇವಿ ವಿದ್ಯಾ ಕೇಂದ್ರಕ್ಕೆ ರಾಜ್ಯ ಸರ್ಕಾರ ಅನುದಾನ ರದ್ದು ಮಾಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಸಾವಿರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.ಈ ಸಂದರ್ಭದಲ್ಲಿ ಪುಟ್ಟ ವಿದ್ಯಾರ್ಥಿ ಬಾಲಕನೋರ್ವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಧಮ್ಕಿ ಹಾಕಿದ್ದು, ಇದು ಸಮಾಜಿಕ ಜಾಲತಾಣಗಳ್ಲಿ ಭಾರಿ ವೈರಲ್ ಆಗಿದೆ..