LATEST NEWS
ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ
ಸಿಎಂ ಕೃಷ್ಣ ಮಠಕ್ಕೆ ಬರದಿರಲು ಬುದ್ದಿ ಜೀವಿಗಳು ಕಾರಣ – ಪೇಜಾವರ ಶ್ರೀ
ಉಡುಪಿ ನವೆಂಬರ್ 20: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಭೇಟಿ ನೀಡಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ತೆರಳಿದ್ದರು. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ನನಗೆ ಮಠದಿಂದ ಆಹ್ವಾನ ಬಂದಿಲ್ಲ ಅದಕ್ಕಾಗಿ ನಾನು ಶ್ರೀಕೃಷ್ಣ ಮಠಕ್ಕೆ ತೆರಳುವುದಿಲ್ಲ ಎಂದು ತಿಳಿಸಿದ್ದರು.
ಈ ಬಗ್ಗೆ ಸ್ಪಷ್ಠೀಕರಣ ನೀಡಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮಿಜಿ ಯವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಠಕ್ಕೆ ಭೇಟಿ ನೀಡಲು ಹಲವು ಬಾರಿ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದರು. ಹಲವು ಭಾರಿ ಆಹ್ವಾನ ನೀಡಿದರೂ ಬರೆದ ಇದ್ದದರಿಂದ ಈ ಭಾರಿ ಆಹ್ವಾನ ನೀಡಲಿಲ್ಲ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಸಕ್ತಿಯಿಲ್ಲ ಎಂದ ಮೇಲೆ ಈ ಬಾರಿ ಆಹ್ವಾನ ನೀಡಿ ಪ್ರಯೋಜನ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.
ನಮಗೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ನಡುವೆ ಹಲವು ಭೇಟಿಗಳಾಗಿವೆ ಎಂದ ಶ್ರೀಗಳು, ಬುದ್ಧಿ ಜೀವಿಗಳು ಮುಖ್ಯಮಂತ್ರಿಗಳ ಮೇಲೆ ಮಠಕ್ಕೆ ಹೋಗಬೇಡಿ ಎಂದು ಒತ್ತಡ ಹೇರುತ್ತಾರೆ ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಮಠಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. ಕೆಲವು ಬುದ್ದಿಜೀವಿಗಳಿಗೆ ಕೃಷ್ಣಮಠ ಅಂದ್ರೆ ಆಗಲ್ಲ ಹಾಗೆ ಪೇಜಾವರ ಶ್ರೀ ಅಂದ್ರೆ ಕೆಲ ಬುದ್ಧಿಜೀವಿಗಳಿಗೆ ಆಗಲ್ಲ ಎಂದು ಹೇಳಿದರು.