LATEST NEWS
ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಪ್ರಕಾಶ್ ರೈ
ರಮಾನಾಥ ರೈ ಸಾಮರಸ್ಯ ಯಾತ್ರೆಗೆ ಪ್ರಕಾಶ್ ರೈ
ಮಂಗಳೂರು ಡಿಸೆಂಬರ್ 9; ಮತೀಯ ಸಾಮರಸ್ಯ ಮೂಡಿಸಲು ಫರಂಗಿಪೇಟೆಯಿಂದ ಮಾಣಿಯವರೆಗೆ ವಿವಿಧ ಸಂಘಟನೆ ಸಹಯೋಗದಲ್ಲಿ ಸಾಮರಸ್ಯ ನಡಿಗೆ, ಸೌಹಾರ್ದತೆಯೆಡೆಗೆ ಕಾಲ್ನಡಿಗೆ ಜಾಥಾ ಡಿಸೆಂಬರ್ 12 ರಂದು ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ 12 ರಂದು ಫರಂಗಿಪೇಟೆಯಲ್ಲಿ ಪಾರಿವಾಳವನ್ನು ಆಕಾಶಕ್ಕೆ ಹಾರಿಸುವ ಮೂಲಕ 9 ಗಂಟೆಗೆ ಜಾಥಾ ಉದ್ಘಾಟನೆಯಾಗಲಿದೆ ಎಂದರು. ಜನರಲ್ಲಿ ಸಾಮರಸ್ಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ನಡಿಗೆ ಕೈಗೊಳ್ಳಲಾಗುವುದೆಂದು ಹೇಳಿದರು. ಯಾರಿಗೂ ತೊಂದರೆಯಾಗದಂತೆ ಘೋಷಣೆಗಳನ್ನು ಕೂಗದೆ ಫಲಕ ಹಿಡಿದು ಬರಲಾಗುವುದು ಎಂದರು.
ಜನರಲ್ಲಿ ಸಾಮರಸ್ಯ ನಿರಂತರವಾಗಿರಬೇಕೆಂಬ ನಿಟ್ಟಿನಲ್ಲಿ ಸಾಮರಸ್ಯ ನಡಿಗೆ ಏರ್ಪಡಿಸಲಾಗಿದೆ. ಈ ಬಗ್ಗೆ ಈಗಾಗಲೇ ವಿವಿಧೆಡೆ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ, ಜಾತ್ಯಾತೀತತೆ, ಸಾಮರಸ್ಯವನ್ನು ತೋರಲು ಒಟ್ಟಾಗಿ ನಡೆಯಬೇಕಿದೆ ಎಂದರು. ಜಾತ್ಯಾತೀತ ಸಿದ್ದಾಂತವನ್ನು ಪ್ರತಿಪಾದಿಸುವ ಎಲ್ಲರನ್ನೂ ಈ ಕಾಲ್ನಡಿಗೆ ಜಾಥಾಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಿದ ರಮಾನಾಥ ರೈ .
ಹತ್ಯೆಯಲ್ಲಿ ಭಾಗಿಯಾದ ಸಂಘಟನೆಗಳಿಗೆ ಈ ಜಾಥಾದಲ್ಲಿ ಭಾಗವಹಿಸಲು ಆಹ್ವಾನವಿಲ್ಲ ಎಂದು ಹೇಳಿದರು. ಸಮಾರೋಪ ಸಮಾರಂಭ ಮಾಣಿಯಲ್ಲಿ ಹರಿಶ್ ಪೂಜಾರಿ ವೇದಿಕೆಯಲ್ಲಿ ನಡೆಯಲಿದ್ದು, ಸಿಪಿಎಂ ಮುಖಂಡರಾದ ಶ್ರೀರಾಮ್ ರೆಡ್ಡಿ, ಸಿದ್ಧನಗೌಡ, ಕಾಂಗ್ರೆಸ್ ನ ಹನುಮಂತಯ್ಯ, ಖ್ಯಾತ ನಟ ಪ್ರಕಾಶ್ ರೈ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
You must be logged in to post a comment Login