ಸಚಿವ ಯು.ಟಿ. ಖಾದರ್ ಹೀಗೂ ಇರ್ತಾರ ..!!!?

ಮಂಗಳೂರು, ಜೂನ್ 14 : ಉಳ್ಳಾಲದ ಶಾಸಕ ಯು.ಟಿ. ಖಾದರ್ ವಿಶಿಷ್ಟರಲ್ಲಿ ವಿಶಿಷ್ಟವಾಗಿ ಕಾಣುತ್ತಾರೆ. ಕಳೆದ ಆನೇಕ ವರ್ಷಗಳಿಂದ ಶಾಸಕರಾಗಿ- ಸಚಿವರಾಗಿ ಜನಾನುರಾಗರಾಗಿದ್ದಾರೆ. ಅತ್ಯಂತ ಸರಳವಾಗಿ ಕಾಣುವ ಇವರು ನಡತೆ ಕೂಡ ಅಷ್ಟೇ ಸರಳ. ಎಲ್ಲರೊಂದಿಗೂ ಬೆರೆಯುವ ಇವರು ಗಾಜಿನ ಮನೆಯಲ್ಲಿ ಕೂತಿರುವ ಇತರ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.

ಇವರು ಯಾವುದೇ ವಿಷಯವನ್ನು ತುಂಬಾ ಪ್ರಾಕ್ಟಿಕಲ್‌ ಆಗಿ ಥಿಂಕ್ ಮಾಡುತ್ತಾರೆ.

ಇಂದು ಕಡಲ್ಕೊರತೆಯಿಂದ ತತ್ತರಿಸಿರುವ ತನ್ನದೇ ಕ್ಷೇತ್ರವಾದ ಉಳ್ಳಾಲಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು ಪರಿಸ್ಥಿತಿಯನ್ನು ಪರಾಮರ್ಶಿಸಿ, ಸಂತ್ರಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಅಲ್ಲದೆ ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿ ಕೊಡುವ ಅಶ್ವಾಸನೆಯನ್ನು ನೀಡಿದ್ದಾರೆ.

ಹೀಗೇ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡಿದಾಗ ಸಚಿವರಿಗೆ ಬಾಯಾರಿಕೆ ಆಗಿದೆ.

ಪಕ್ಕದಲ್ಲೇ ಇದ್ದ ಸಣ್ಣ ಅಂಗಡಿಗೆ ತೆರಳಿದ್ದಾರೆ. ಅಂಗಡಿಯವರಿಂದ ಕತ್ತಿಯನ್ನು ತಗೊಂಡು ಸ್ವತ ಎಳನೀರು ಕೆತ್ತಿ ಎಳನೀರು ಕುಡಿದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅವರ ಈ ಸರಳ ನಡೆ ಆಶ್ಚರ್ಯದೊಂದಿಗೆ ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದ್ದು ಮಾತ್ರ ಸತ್ಯ.

ವಿಡಿಯೋಗಾಗಿ…

3 Shares

Facebook Comments

comments