Connect with us

DAKSHINA KANNADA

ಶಾಸಕ ಮೊಯಿದ್ದೀನ್ ಬಾವಾ ಕ್ಷೇತ್ರದ ನಿರ್ಲಕ್ಷಕ್ಕೆ ವೇಣುಗೋಪಾಲ್ ಗರಂ

ಶಾಸಕ ಮೊಯಿದ್ದೀನ್ ಬಾವಾ ಕ್ಷೇತ್ರದ ನಿರ್ಲಕ್ಷಕ್ಕೆ ವೇಣುಗೋಪಾಲ್ ಗರಂ

ಮಂಗಳೂರು ನವೆಂಬರ್ 6: ಮಂಗಳೂರಿನಲ್ಲಿ ಕಾಂಗ್ರೆಸ್ ನಿಂದ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ಇಂದು ಆರಂಭವಾಗಿದೆ. ಕಾಂಗ್ರೇಸ್ ಮನೆ ಮನೆ ಅಭಿಯಾನದಲ್ಲಿ ಭಾಗವಹಿಸಲು ಕಾಂಗ್ರೇಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಆಗಮಿಸಿದ್ದು ಅವರ ನೇತೃತ್ವದಲ್ಲಿ ಕಾಂಗ್ರೇಸ್ ಮನೆ ಮನೆ ಅಭಿಯಾನ ನಡೆಯುತ್ತಿದ್ದೆ.

ಈ ನಡುವೆ ಮನೆ ಮನೆ ಕಾಂಗ್ರೆಸ್ ಅಭಿಯಾನದಲ್ಲಿ ಅವ್ಯವಸ್ಥೆಯ ಬಗ್ಗೆ ಕಾಂಗ್ರೇಸ್ ಉಸ್ತುವಾರಿ ವೇಣುಗೋಪಾಲ್ ಗರಂ ಆಗಿದ್ದು ಯೋಜನೆ ಪ್ರಕಾರ ಅಭಿಯಾನ ನಡೆಯದ ಹಿನ್ನಲೆಯಲ್ಲಿ ವೇಣುಗೋಪಾಲ್ ಶಾಸಕ ಮೊಯಿದ್ದಿನ್ ಭಾವಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಮನೆ ಮನೆ ಭೇಟಿ ನಡುವೆ ಶಾಸಕ ಮೊಯಿದ್ದೀನ್ ಬಾವಾ ಅವರ ಕ್ಷೇತ್ರದಲ್ಲಿ ಮೂಲ ಸೌಕರ್ಯದಿಂದ ವಂಚಿತವಾದ ಕುಟುಂಬವನ್ನು ವೇಣುಗೋಪಾಲ್ ಭೇಟಿ ಮಾಡಿದರು.

ಶಾಸಕ ಮೊಯಿದ್ದೀನ್ ಬಾವಾ ಅವರ ಕ್ಷೇತ್ರದ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಈ ಕೂಡಲೆ ಮನೆ ನಿರ್ಮಿಸಿ ಕೊಡಲು ವೇಣುಗೋಪಾಲ್ ಆಗ್ರಹಿಸಿದರು. ಮನೆಯವರಿಗೆ ತನ್ನ ನಂಬರ್ ಬರೆದುಕೊಟ್ಟ ವೇಣುಗೋಪಾಲ್ ಮನೆ ನಿರ್ಮಿಸದಿದ್ದರೆ ಕರೆ ಮಾಡಲು ಮನೆಯವರಿಗೆ ಸೂಚಿಸಿದ್ದಾರೆ.