LATEST NEWS
ಶರತ್ ಸಾವಿನ ಷಡ್ಯಂತ್ರದ ಸ್ಪೋಟಕ ಮಾಹಿತಿ ನನ್ನಲ್ಲಿದೆ…. ವಜ್ರದೇಹಿ ಸ್ವಾಮೀಜಿ
ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಹತ್ಯೆ ಪ್ರಕರಣದ ಷಡ್ಯಂತ್ರದ ಸ್ಪೋಟಕ ಮಾಹಿತಿಯನ್ನು ತನಿಖಾ ದಳಕ್ಕೆ ನೀಡುವುದಾಗಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಬಹಿರಂಗಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶರತ್ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಈ ಸಂಬಂಧ ತನ್ನ ಬಳಿ ಸ್ಪೋಟಕ ಮಾಹಿತಿಯಿದ್ದು, ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದ್ದೇ ಆದಲ್ಲಿ ಆ ಮಾಹಿತಿಯನ್ನು ತನಿಖಾ ಸಂಸ್ಥೆಗೆ ನೀಡುವುದಾಗಿ ಹೇಳಿದರು. ಐಪಿಎಸ್ ಅಧಿಕಾರಿಯೊಬ್ಬರನ್ನು ತನ್ನ ಸಹಚರರ ಮುಂದೆ ನಿಲ್ಲಿಸಿ ವ್ಯಕ್ತಿಯೊಬ್ಬರ ಮೇಲೆ ಆ ಸೆಕ್ಷನ್ , ಈ ಸೆಕ್ಷನ್ ಹಾಕಿ ಎನ್ನುವಂತಹ ಜನಪ್ರತಿನಿಧಿಯಿರುವಾಗ ರಾಜ್ಯ ಪೋಲೀಸರಿಗೆ ತನ್ನ ಬಳಿಯಿರುವ ಮಾಹಿತಿಯನ್ನು ನೀಡಿದ್ದೇ ಆದಲ್ಲಿ, ಅದನ್ನು ತಿರುಚುವ ಅಥವಾ ಮುಚ್ಚಿಡುವ ಪ್ರಯತ್ನವನ್ನು ನಡೆಸಬಹುದೆಂಬ ಕಾರಣಕ್ಕೆ ಪೋಲೀಸರಿಗೆ ತನ್ನ ಬಳಿಯಿರುವ ಮಾಹಿತಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಮುಂದಿನ ದಿನಗಳಲ್ಲಿ ಈ ಸಂಬಂಧ ಕೇಂದ್ರ ಗ್ರಹಮಂತ್ರಿ ಹಾಗೂ ಪ್ರಧಾನಿ ಬಳಿಗೂ ತೆರಳುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಶರತ್ ಶವಯಾತ್ರೆಯ ಮೆರವಣಿಗೆಯಲ್ಲಿ ತನ್ನ ವಾಹನಕ್ಕೂ ಹಾನಿಯಾಗಿದ್ದು, ಘಟನೆಗೆ ತಾನೂ ಕೂಡಾ ಸಾಕ್ಷಿಯಾಗಿದ್ದರೂ, ಏಕಾಏಕಿ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಗಂಭೀರ ಪ್ರಕರಣ ದಾಖಲಿಸುವುದು ಷಡ್ಯಂತ್ರವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
You must be logged in to post a comment Login