ವರದಕ್ಷಿಣೆಯ ದಾಹದಿಂದ  ನವವಿವಾಹಿತೆಯನ್ನು ಸುಟ್ಟು ನಾಲೆಗೆ ಬಿಸಾಡಿದ ಘಟನೆ ಕೇರಳ ರಾಜ್ಯದ ತ್ರಿಶೂರಿನಲ್ಲಿ ಬೆಳಕಿಗೆ ಬಂದಿದೆ. 

ತ್ರಿಶೂರ್ (ಕೇರಳ) : ವರದಕ್ಷಿಣೆಯ ದಾಹದಿಂದ  ನವವಿವಾಹಿತೆಯನ್ನು ಸುಟ್ಟು ನಾಲೆಗೆ ಬಿಸಾಡಿದ ಘಟನೆ ಕೇರಳ ರಾಜ್ಯದ ತ್ರಿಶೂರಿನಲ್ಲಿ ಬೆಳಕಿಗೆ ಬಂದಿದೆ.

ಮೃತಳನ್ನು ಅರ್ಚನಾ (20) ಎಂದು ಗುರುತಿಸಲಾಗಿದ್ದು ಆರು ತಿಂಗಳ ಹಿಂದೆಯಷ್ಟೇ ಶರೋನ್ ಎಂಬ ಯುವಕನನ್ನು ಅರ್ಚನಾ ಪ್ರೇಮ ವಿವಾಹವಾಗಿದ್ದರು. ಶರೋನ್ ಮನೆಯ ಹಿಂಭಾಗದ ನಾಲೆಯಲ್ಲಿ ಅರ್ಚನಾಳ ಶವ ಸುಟ್ಟು ಕರಕಲಾದ ಸ್ಥತಿಯಲ್ಲಿ ಪತ್ತೆಯಾಗಿದೆ.

ರಾಜ್ಯ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ವರದಿಯ ಪ್ರಕಾರ, ವರದಕ್ಷಿಣೆ ಕಿರುಕುಳದಿಂದಾಗಿ 20 ವರ್ಷದ ಅರ್ಚನಾ ದಾರುಣ ಅಂತ್ಯ ಕಂಡಿದ್ದಾಳೆ. ಈ ಘಟನೆಯಲ್ಲಿ ಅರ್ಚನಾಳ ಗಂಡ ಶಾರೋಣ್ ಮತ್ತು ಆತನ ತಾಯಿಯ ವಿರುದ್ಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿದ್ದಾರೆ. ಅರ್ಚನಾ ಮತ್ತು ಶರೋನ್ ಅವರ ವಿವಾಹ ಆರು ತಿಂಗಳ ಹಿಂದೆ ನಡೆದಿತ್ತು. ಮದುವೆಯ ನಂತರ, ವರದಕ್ಷಿಣೆ ನೀಡಲಿಲ್ಲ ಎಂಬ ಕಾರಣಕ್ಕೆ ಶಾರೋಣ್ ಮತ್ತು ಆತನ ಕುಟುಂಬದವರು ಅರ್ಚನಾ ಅವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಮದುವೆಯಾದಾಗಿನಿಂದ, ಆಕೆಯನ್ನು ಮನೆಯವರೊಂದಿಗೆ ಮಾತನಾಡಲು ಅಥವಾ ಸಂಪರ್ಕಿಸಲು ಸಹ ಬಿಡುತ್ತಿರಲಿಲ್ಲ ಎಂದು ಯುವತಿಯ ತಂದೆ ಆರೋಪಿಸಿದ್ದಾಎ. ವಿವಾಹಕ್ಕೆ ಮನೆಯವರಿಗೆ ವಿರೋಧವಿದ್ದರೂ, ಮಗಳು ಸಂತೋಷದಿಂದ ಬಾಳಲಿ ಎಂದು ಅವರು ಬಯಸಿದ್ದರು ಎಂದು ತಂದೆ ತಿಳಿಸಿದ್ದಾರೆ.

 

Share Information