LATEST NEWS
ರೌಡಿ ಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಗ್ಯಾಂಗ್ ಸದಸ್ಯ ನ ಬರ್ಬರ ಹತ್ಯೆ
ರೌಡಿ ಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಗ್ಯಾಂಗ್ ಸದಸ್ಯ ನ ಬರ್ಬರ ಹತ್ಯೆ
ಮಂಗಳೂರು ಡಿಸೆಂಬರ್ 25: ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು ಕ್ರಿಸ್ಮಸ್ ಹಬ್ಬದ ಗುಂಗಿನಲ್ಲಿದ್ದ ರೌಡಿಶೀಟರ್ ಒಬ್ಬನನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಂಗಳೂರಿನ ವೆಲೆನ್ಸಿಯಾದ ಗೋರಿಗುಡ್ಡದಲ್ಲಿ ಘಟನೆ ನಡೆದಿದೆ. 21 ವರ್ಷದ ಮೆಲ್ರಿಕ್ ಡಿಸೋಜ ಹತ್ಯೆಯಾದ ಯುವಕ.
ನಿನ್ನೆ ಉರ್ವಾದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ವಿಕ್ಷಿಸಿ ತಡರಾತ್ರಿ ಮೆಲ್ರಿಕ್ ಡಿಸೋಜಾ ತನ್ನ ಸಹವರ್ತಿಗಳೊಂದಿಗೆ ಮನೆ ಮರಳಿದ್ದ. ಈ ಸಂದರ್ಭದಲ್ಲಿ ಗೋರಿಗುಡ್ಡದ ಮನೆಯಲ್ಲಿ ತಡರಾತ್ರಿ ವೇಳೆ ಐವರು ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿದ್ದು ಮನೆಯ ಆವರಣದಲ್ಲಿ ಅಟ್ಟಾಡಿಸಿ ಕೊಲೆ ಮಾಡಿದ್ದಾರೆ.
ಮೆಲ್ರಿಕ್ ಡಿಸೋಜ ರೌಡಿ ಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಗ್ಯಾಂಗ್ ನ ಸದಸ್ಯ ಎಂದು ಹೇಳಲಾಗಿದೆ. ಈತನ ವಿರುದ್ಧ ಎರಡು ಕೊಲೆಯತ್ನ ಪ್ರಕರಣ ಸೇರಿದಂತೆ ಪಾಂಡೇಶ್ವರ ಮತ್ತು ಬಂದರು ಠಾಣೆಗಳಲ್ಲಿ ಪ್ರಕರಣ ಎದುರಿಸುತ್ತಿದ್ದ. ಕಳೆದ ವರ್ಷದ 2016 ಆಗಸ್ಟ್ ತಿಂಗಳಲ್ಲಿ ವೆಲೆನ್ಸಿಯಾ ಸಮೀಪದ ಮಾರ್ನಮಿಕಟ್ಟೆ ಎಂಬಲ್ಲಿ ಸಂದೀಪ್ ಶೆಟ್ಟಿ ಎಂಬಾತನ ಕೊಲೆಯತ್ನ ನಡೆದಿತ್ತು. ಆ ಪ್ರಕರಣದಲ್ಲಿಯು ಮೆಲ್ರಿಕ್ ಡಿಸೋಜ ಆರೋಪಿಯಾಗಿದ್ದ. ಇದೀಗ ರಿವೇಂಜ್ ತೀರಿಸಿದ ಮಾದರಿಯಲ್ಲಿ ಈ ಕೊಲೆ ಪ್ರಕರಣ ನಡೆದಿದ್ದು ಯಾರು ಕೃತ್ಯ ನಡೆಸಿದ್ದಾರೆಂದು ಇನ್ನಷ್ಟೆ ಗೊತ್ತಾಗಬೇಕು. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login