LATEST NEWS
ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಡಾ. ಶಾನುಭಾಗ್
ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಿದ ಡಾ. ಶಾನುಭಾಗ್
ಉಡುಪಿ ಅಕ್ಟೋಬರ್ 31: ರಾಜ್ಯ ಸರಕಾರ ಕೊಡಮಾಡುವ 2017ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು 62 ಸಾಧಕರಿಗೆ ಈ ಬಾರಿತ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಈ ನಡುವೆ ಪ್ರಶಸ್ತಿಯ ಕುರಿತು ಅಸಮಧಾನವುಂಟಾಗಿದ್ದು ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರ ನಾಥ್ ಶಾನುಭಾಗ್ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.
ಈ ಸಲ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಡಾ. ರವೀಂದ್ರ ನಾಥ್ ಶಾನುಭಾಗ್ ಒಬ್ಬರು , ಅವರನ್ನು ಸಮಾಜ ಸೇವೆ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ ಡಾ.ರವೀಂದ್ರ ನಾಥ್ ಶಾನುಭಾಗ್ ಅವರು ರಾಜ್ಯದಲ್ಲಿ ಯಾವುದೇ ಸಮಾಜ ಸೇವೆ ನಡೆಯುತ್ತಿಲ್ಲ ಈ ಹಿನ್ನಲೆಯಲ್ಲಿ ನಾನು ರಾಜ್ಯೋತ್ಸವ ಪ್ರಶಸ್ತಿ ತೆಗೆದು ಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಐಎಎಸ್ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಡಾ. ರವೀಂದ್ರ ನಾಥ್ ಶಾನುಭಾಗ್ ಸಮಾಜ ಸೇವೆಯ ವಿಷಯದಲ್ಲಿ ಅಧಿಕಾರಿಗಳು ಅಸಡ್ಡೆ ಮಾಡುತ್ತಿದ್ದು , ಮಂತ್ರಿಗಳಿಗೆ ನಮ್ಮ ಕಾಳಜಿ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಪ್ರಶಸ್ತಿ ಸ್ವೀಕರಿಸಬೇಕೆಂದು ಅವರು ಅಸಮಧಾನ ವ್ಯಕ್ತಪಡಿಸಿದರು. ಐಎಎಸ್ ಅಧಿಕಾರಿಗಳಾದ ಕೆ.ಜಿ ಜಗದೀಶ್, ಡಾ. ವಿಶಾಲ್ ಸಂತ್ರಸ್ಥರಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಹಾಗೂ ಅದರ ಜೊತೆಗೆ ಸಿಗುವ ಒಂದು ಲಕ್ಷ ರೂಪಾಯಿ ಹಾಗೂ 20 ಗ್ರಾಂ ಬಂಗಾರದ ನಾಣ್ಯ ಹಾಗೂ ಪ್ರಶಸ್ತಿ ಪತ್ರ ಬೇಡ ಎಂದು ಹೇಳಿದ ಅವರು ನನಗೆ ಸ್ವರ್ಗಕೊಟ್ಟರೂ ನನಗೆ ಬೇಡ ನೊಂದ- ಕಣ್ಣೀರು ಸುರಿಸುತ್ತಿರುವವರಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು, ಇದು ಉದ್ಧಟತನದ ನಿರ್ಧಾರ ಅಲ್ಲ, ಪ್ರಶಸ್ತಿ ಸ್ವೀಕರಿಸುವ ಎಲ್ಲರ ಮೇಲೆ ಗೌರವದಿಂದ ಹೇಳುತ್ತಿದ್ದೇನೆ ಎಂದು ತಿಳಿಸಿದರು.
You must be logged in to post a comment Login