Connect with us

DAKSHINA KANNADA

ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿರುವ ಸುರತ್ಕಲ್ ವ್ಯಾಪಾರಿಗಳು

 

ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿರುವ ಸುರತ್ಕಲ್ ವ್ಯಾಪಾರಿಗಳು

ಮಂಗಳೂರು, ಮಾರ್ಚ್ 1: ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿದ ಮಾರುಕಟ್ಟೆ ಕಟ್ಟಡವನ್ನು ತಮಗೆ ತೋಚಿದಂತೆ ಒಡೆದು ಹಾಕುತ್ತಿರುವ ಪ್ರಕ್ರಿಯೆ ಸುರತ್ಕಲ್ ನಲ್ಲಿ ನಿರ್ಮಾಣಗೊಂಡ ತಾತ್ಕಾಲಿಕ ಮಾರುಕಟ್ಟೆಯಲ್ಲಿ ನಡೆಯುತ್ತಿದೆ.

ಸುರತ್ಕಲ್ ನಲ್ಲಿ ಈ ಹಿಂದೆ ಇದ್ದ ಮಾರುಕಟ್ಟೆಗೆ ಹೊಸ ಕಟ್ಟಡವನ್ನು ನಿರ್ಮಿಸುವ ಉದ್ಧೇಶದಿಂದ ಐದು ಕೋಟಿ ರೂಪಾಯಿ ವೆಚ್ಚ ಮಾಡಿ ತಾತ್ಕಾಲಿಕ ಕಟ್ಟಡವನ್ನು ನಿರ್ಮಿಸಿ ಸ್ಥಳಾಂತರಗೊಂಡ ವ್ಯಾಪಾರಿಗಳಿಗೆ ತಾಲ್ಕಾಲಿಕ ಕಟ್ಟಡದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಕಟ್ಟಡದಲ್ಲಿ ಸ್ಥಳೀಯ ಶಾಸಕರಾದ ಮೊಯಿದೀನ್ ಬಾವಾ ಅವರ ಅನುಯಾಯಿಗಳಿಗೇ ನೀಡಲಾಗಿದೆ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು.

ಆದರೆ ಇದೀಗ ಐದು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣಗೊಂಡ ಈ ಕಟ್ಟಡವನ್ನು ಈ ವ್ಯಾಪಾರಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ಒಡೆದು ಹಾಕುತ್ತಿದ್ದಾರೆ.

ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವ ವ್ಯಾಪಾರಿಗಳ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದರೆ, ಅಧಿಕಾರಿಗಳು ಶಾಸಕರ ಭಯದಿಂದ ತುಟಿಕ್-ಪಿಟಿಕ್ ಎನ್ನುತ್ತಿಲ್ಲ.

ವ್ಯಾಪಾರಿಗಳ ಹಾಗೂ ಶಾಸಕರ ಈ ರೀತಿಯ ನಿರಂಕುಶ ಪ್ರಭುತ್ವವನ್ನು ವಿರೋಧಿಸಿ ಇದೀಗ ಕೆಲವು ಸಂಘಟನೆಗಳು ಪ್ರತಿಭಟನೆಗೂ ಸಿದ್ಧತೆ ನಡೆಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *