Connect with us

    DAKSHINA KANNADA

    ಯಕ್ಷಗಾನದಲ್ಲೂ ಇವನರ್ವ, ಇವನರ್ವ , ಇವನ್ಮ್ವಇವನ್ಮ್ವ…

    ಯಕ್ಷಗಾನದಲ್ಲೂ ಇವನರ್ವ, ಇವನರ್ವ , ಇವನ್ಮ್ವಇವನ್ಮ್ವ…

    ಮಂಗಳೂರು, ಮಾರ್ಚ್ 31: ರಾಜ್ಯ ಪ್ರವಾಸದಲ್ಲಿದ್ದ ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ಕಾಂಗ್ರೇಸ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ್ದರು.

    ಈ ಸಮಾವೇಶದಲ್ಲಿ ರಾಹುಲ್ ಮಾತನಾಡಿದ ವಿಚಾರಗಳಿಗಿಂತ ಅತ್ಯಂತ ಹೆಚ್ಚು ಪ್ರಚಾರವಾಗಿದ್ದು, ಅವರು ಉಚ್ಛರಿಸಿದ ಎರಡು ಸಾಲು ಬಸವಣ್ಣನ ವಚನಗಳು.

    ಲಿಂಗಾಯುತ-ವೀರಶೈವ ಪ್ರತ್ಯೇಕ ಧರ್ಮವನ್ನಾಗಿ ಘೋಷಿಸಿದ ಬಳಿಕ ಕಾಂಗ್ರೇಸ್ ಪಕ್ಷ ಲಿಂಗಾಯತ ಧರ್ಮದ ಟ್ರಂಪ್ ಕಾರ್ಡ್ ನಲ್ಲೇ ಚುನಾವಣೆ ಎದುರಿಸಲು ಪ್ರಯತ್ನಿಸುತ್ತಿದೆ.

    ಈ ಕಾರಣಕ್ಕಾಗಿಯೇ ಕಾಂಗ್ರೇಸ್ ನಾಯಕರ ಬಾಯಲೆಲ್ಲಾ ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಬಗ್ಗೆ ಹಾಗೂ ಅವರ ವಚನಗಳ ಬಗ್ಗೆ ನುಡಿಮುತ್ತುಗಳು ಹರಿದಾಡುತ್ತಿದೆ.

    ರಾಹುಲ್ ಗಾಂಧಿ ಕೂಡಾ ಇಂಥಹುದೇ ಒಂದು ಪ್ರಯತ್ನವನ್ನು ಮಾಡಿ ಇದೀಗ ನಗೆಪಾಟಲಿಗೆ ತುತ್ತಾಗಿದ್ದಾರೆ.

    ಇವನಾರವ, ಇವನಾರವ, ಇವನಮ್ಮವ , ಇವನಮ್ಮವ ಎನ್ನುವ ವಚನವನ್ನು ಇವನರ್ವ, ಇವನರ್ವ, ಇವನ್ಮ್ವ , ಇವನ್ಮ್ವ ಎಂದು ರಾಹುಲ್ ಉಚ್ಚರಿಸುವ ಮೂಲಕ ಮುಜುಗರಕ್ಕೀಡಾಗಿದ್ದರು.

    ಇದೇ ರೀತಿ ಇನ್ನೊಂದು ಸಭೆಯಲ್ಲಿ ನುಡಿದಂತೆ ನಡೆ ಎನ್ನುವ ಸಾಲನ್ನು ನುಡಿಡಂಟೆ ನಡೆ ಎಂದು ತಪ್ಪಾಗಿ ಉಚ್ಛರಿಸಿದ್ದರು.

    ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ, ಇದೀಗ ಈ ಮಾತು ಯಕ್ಷಗಾನದ ಹಾಸ್ಯದಲ್ಲೂ ಕೇಳಿ ಬರಲಾರಂಭಿಸಿದೆ.

    ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಹಾಸ್ಯ ಕಲಾವಿದರು ರಾಹುಲ್ ಗಾಂಧಿಯ ಈ ಮಾತನ್ನೇ ಯಕ್ಷಗಾನದಲ್ಲೂ ಅನುಕರಣೆ ಮಾಡುವ ಮೂಲಕ ಭಾರೀ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.

    ಯಕ್ಷಗಾನದಲ್ಲಿ ಹಾಸ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದು, ರಾಹುಲ್ ಗಾಂಧಿಯ ವಚನದ ಮಾತು ಇದೀಗ ಫುಲ್ ಹಿಟ್ ಆಗುತ್ತಿದೆ.

    ವಿಡಿಯೋ…

    Share Information
    Advertisement
    Click to comment

    You must be logged in to post a comment Login

    Leave a Reply