Connect with us

    DAKSHINA KANNADA

    ಯಕ್ಷಗಾನದಲ್ಲಿ ಮುಸ್ಲಿಂ ಧರ್ಮದ ಅವಹೇಳನ ಆರೋಪ, ಮುಸ್ಲಿಂ ಸಂಘಟನೆಗಳಿಂದ ರಕ್ತಪಾತದ ಸಂಕಲ್ಪ..!

    ಯಕ್ಷಗಾನದಲ್ಲಿ ಮುಸ್ಲಿಂ ಧರ್ಮದ ಅವಹೇಳನ ಆರೋಪ, ಮುಸ್ಲಿಂ ಸಂಘಟನೆಗಳಿಂದ ರಕ್ತಪಾತದ ಸಂಕಲ್ಪ.!

    ಮಂಗಳೂರು,ಜನವರಿ 11: ಕರಾವಳಿಯ ಜನಪದದ ಪ್ರತೀಕವಾಗಿರುವ ಯಕ್ಷಗಾನ ಪ್ರದರ್ಶನದ ಪ್ರಸಂಗವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು ಅತ್ಯಂತ ಕೀಳಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.

    ಈ ಕುರಿತ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೃರಲ್ ಅಗಿದೆ. ಈ ಹಿನ್ನಲೆಯಲ್ಲಿ ಮುಸ್ಲಿಂ ಸಂಘಟನೆಯಾದ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಭಾರಿ ವಿರೋಧ ವ್ಯಕ್ತಪಟಿಸಿದೆ.

    ಪ್ರಸಂಗದಲ್ಲಿರುವ ಕಲಾವಿದರು ನಡು ಬೀದಿಯಲ್ಲಿ ಹೆಣವಾಗುವುದನ್ನು ಯಾರಿಗೂ ತಪ್ಪಿಸಲಾಗದು ಎನ್ನುವ ಕೊಲೆ ಬೆದರಿಕೆಯ ಸಂದೇಶಗಳು ಈ ಸಂಘಟನೆ ಹೆಸರಿನಲ್ಲಿ ಹರಿದಾಡುತ್ತಿದೆ.

    ಈ ಯಕ್ಷಗಾನ ಪ್ರಸಂಗ ದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತ ಪಟಿಸಲಾಗುತಿದ್ದು ಈ ಯಕ್ಷಗಾನ ಪ್ರಸಂಗವನ್ನು ಈ ಕೂಡಲೇ ನಿಲ್ಲಿಸಬೇಕು ಎನ್ನುವ ಎಚ್ಚರಿಕೆಯೂ ಇದೀಗ ಕೇಳಿಬರಲಾರಂಭಿಸಿದೆ.

    ಉಡುಪಿಯ ಪ್ರಸಿದ್ದ ಸಾಲಿಗ್ರಾಮ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಪ್ರದರ್ಶಿಸಿದ ಪ್ರಸಂಗ ಇದಾಗಿದ್ದು ಎಲ್ಲಿ?ಯಾವಾಗ ? ಪ್ರದರ್ಶಿಸಲಾಯಿತು ಎಂಬುದರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

    ಅದರೆ ಸಾಮಾಜಿಕ ಜಾಲತಾಣಗಳಲ್ಲಿ “ಯಕ್ಷಗಾನದಲ್ಲಿ ಕೂಡ ಮುಸ್ಲಿಂ ಸಮುದಾಯದ ಬಗ್ಗೆ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಮುಸ್ಲಿಮರಿಗೆ ಹುಟ್ಟುವ ಮಕ್ಕಳ ಬಗ್ಗೆ ಅವಮಾನಿಸಲಾಗಿದೆ.

    ಮುಸ್ಲಿಮರಿಗೆ ಹುಟ್ಟುವ ಇಷ್ಟೊಂದು ಮಕ್ಕಳು ನಿಮಗೆ ಹುಟ್ಟಿದ್ದು ಎಂಬ ಗ್ಯಾರಂಟಿ ಇದೆಯೇ ಎಂದು ಅವಹೇಳನ ಮಾಡಿ ಅತೀ ಕೀಳು ಭಾಷೆ ಬಳಸಲಾಗಿದೆ.

    ಮುಸ್ಲಿಮರು ನೀವು ಎಲ್ಲಿಂದಲೋ ಬಂದವರು ಎಂದು ಉಲ್ಲೇಖಿಸಲಾಗಿದೆ. ಹಿಂದುಗಳ ದಾರ್ಮಿಕ ಕಾರ್ಯಕ್ರಮದಲ್ಲಿ ಕೂಡ ಕೋಮುಪ್ರಚೋದನೆ ಮಾಡಿದ ವಿರುದ್ದ ಮುಸ್ಲಿಂ ಸಮುದಾಯ ಸಂಘಟನೆಗಳು ಗಮನಿಸಬೇಕು .ಇದರ ವಿರುದ್ದ ಕೇಸು ದಾಖಲಿಸಬೇಕು. ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಇನ್ನೊಂದು ಧರ್ಮವನ್ನು ಅವಮಾನಿಸುತ್ತಿರುವುದು ಹಿಂದು ಧರ್ಮಕ್ಕೆ ಶೋಭೆ ತರುವಂತದಲ್ಲ.

    ಇಂತಹ ಅವಿವೇಕಿ ಯಕ್ಷಗಾನದ ಆಟವನ್ನು ಕೊನೆಗೊಳಿಸಿ ಇಲ್ಲದಿದ್ದರೆ ಇಂತಹ ಪಾತ್ರದಾರಿಗಳು ಬೀದಿಯಲ್ಲಿ ಹೆಣವಾಗುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಾದಕ್ಕೂ ಒಂದು ಮಿತಿ ಎಂಬುವುದು ಇದೆ ನೆನಪಿರಲಿ ಮುಸ್ಲಿಮರು ಯಾವತ್ತೂ ನಿಸ್ಸಾಹಾಯಕತೆಯಿಂದ ಬದುಕಿಲ್ಲ ಇನ್ನು ಬದುಕುವುದು ಇಲ್ಲ .

    ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

    ಈ ಹಿನ್ನೆಲೆಯಲ್ಲಿ ಯಕ್ಷಗಾನದಲ್ಲಿ ಈ ತುಣುಕು ಇದೀಗ ಇನ್ನೊಂದು ವಿವಾದ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

    ಕರಾವಳಿಯಲ್ಲಿ ಕೋಮುದ್ಯೇಷ ಹೊಗೆಯಾಡುತ್ತಿರುವ ಈ ಸಂದರ್ಭದಲ್ಲಿ ಈ ಯಕ್ಷಗಾನ ಪ್ರಸಂಗದ ತುಣಕನ್ನು ಹರಿಬಿಟ್ಟು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ.

    ಬೆಂಕಿ ಹಚ್ಚಿಕೊಳ್ಳುವ ಮೊದಲು ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಗಮನಹರಿಸಬೇಕಿದೆ.

    ವಿಡಿಯೋಗಾಗಿ…

    Share Information
    Advertisement
    Click to comment

    You must be logged in to post a comment Login

    Leave a Reply