Connect with us

    DAKSHINA KANNADA

    ಮೊಯಿದೀನ್ ಬಾವಾ ದೈವಸ್ಥಾನ ಭೇಟಿ, ಬಾವಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳ ಚಾಟಿ

    ಮೊಯಿದೀನ್ ಬಾವಾ ದೈವಸ್ಥಾನ ಭೇಟಿ, ಬಾವಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳ ಚಾಟಿ

    ಮಂಗಳೂರು, ಮಾರ್ಚ್ 31: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಇತ್ತೀಚೆಗೆ ದೈವದ ಗುಡಿಗೆ ಭೇಟಿ ನೀಡಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

    ಚುನಾವಣೆ ಘೋಷಣೆಯಾದ ಬಳಿಕ ಮೊಯಿದೀನ್ ಬಾವಾ ಹೊಸಬೆಟ್ಟುವಿನ ಕೊರ್ದಬ್ಬು ದೈವಸ್ಥಾನಕ್ಕೆ ಭೇಟಿ ನೀಡಿದ್ದರು.

    ಈ ಸಂದರ್ಭದಲ್ಲಿ ದೈವಸ್ಥಾನದ ಪಾತ್ರಿ ಚುನಾವಣೆಯಲ್ಲಿ ಮೊಯಿದೀನ್ ಬಾವಾರಿಗೆ ಯಾವುದೇ ತೊಂದರೆಯಾಗದಂತೆ ದೈವ ನೋಡಿಕೊಳ್ಳಬೇಕು ಹಾಗೂ ಮುಂದಿನ 5 ವರ್ಷವೂ ಮೊಯಿದೀನ್ ಬಾವಾ ಅವರೇ ಶಾಸಕರಾಗುವಂತೆ ಕರುಣಿಸಬೇಕೆಂದು ಬೇಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ದೇವಸ್ಥಾನ ಭೇಟಿಯ ಔಚಿತ್ಯವನ್ನು ಇದೀಗ ಮುಸ್ಲಿಂ ಮೂಲಭೂತವಾದಿಗಳು ಪ್ರಶ್ನಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಮೊಯಿದೀನ್ ಬಾವಾ ವಿರುದ್ಧ ಭಾರೀ ಟೀಕೆಗಳನ್ನು ಈ ಮೂಲಭೂತವಾದಿಗಳು ಮಾಡುತ್ತಿದ್ದಾರೆ.

    ಚುನಾವಣೆ ಬಂದಾಗ ಹಿಂದೂಗಳನ್ನು ಒಲೈಸುವ ಮೂಲಕ ಇಸ್ಲಾಂ ನ ನಿಯಮಗಳನ್ನು ಮೀರುತ್ತಿದ್ದಾರೆ ಎನ್ನುವ ಆರೋಪಗಳನ್ನೂ ಈ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದಾರೆ.

    Video…

    Share Information
    Advertisement
    Click to comment

    You must be logged in to post a comment Login

    Leave a Reply