ಪ್ರಿಯಕರನಿಗಾಗಿ ಸ್ವಂತ ಗಂಡನನ್ನೇ  ಭೀಕರವಾಗಿ ಸಾಯಿಸಿ ಬಳಿಕ ಸಿಕ್ಕಿ ಬಿದ್ದ ಮಹಿಳೆ ಮುಸ್ಕಾನ್  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಮೀರತ್ :  ಪ್ರಿಯಕರನಿಗಾಗಿ ಸ್ವಂತ ಗಂಡನನ್ನೇ  ಭೀಕರವಾಗಿ ಸಾಯಿಸಿ ಬಳಿಕ ಸಿಕ್ಕಿ ಬಿದ್ದ ಮಹಿಳೆ ಮುಸ್ಕಾನ್  ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಮಗುವಿನ ಅಪ್ಪ  ಆಕೆಯ ಗಂಡನಾ ಅಥವಾ ಪ್ರಿಯಕರ ನಾ ಎಂಬುದು ತಿಳಿದು ಬಂದಿಲ್ಲ.

ಮೀರತ್​ನಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಸ್ಕಾನ್ ಸೇರಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು. ಸ್ವಲ್ಪ ಸಮಯದಲ್ಲೇ ಮುಸ್ಕಾನ್ ಗರ್ಭಿಣಿ ಎಂಬುದು ತಿಳಿದುಬಂದಿತ್ತು.  ಬಂಧಿಸಿದ ಎರಡು ದಿನಗಳ ಬಳಿಕ ಜೈಲಿನಲ್ಲಿರುವ ಮುಸ್ಕಾನ್ ಆರೋಗ್ಯ ಹದಗೆಟ್ಟಿತ್ತು. ಅಸ್ವಸ್ಥಳಾಗಿದ್ದ ಆಕೆಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತು.

ಮಾರ್ಚ್​ 3ರಂದು ಪತಿ ಸೌರಭ್ ರಜಪೂತ್​ನನ್ನು ಕೊಂದು ನಂತರ ಪ್ರಿಯಕರ ಸಾಹಿಲ್ ಜತೆ 11 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ್ದಳು.

ಭಾನುವಾರ ರಾತ್ರಿ 11.30 ರ ಸುಮಾರಿಗೆ ಮುಸ್ಕಾನ್ ಅವರ ಹೆರಿಗೆ ನೋವು ಹೆಚ್ಚಾದ ನಂತರ ಅವರನ್ನು ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದ್ದು 2.4 ಕೆಜಿ ತೂಕ ಹೊಂದಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಜೈಲು ಅಧಿಕಾರಿಗಳು  ಮಾಹಿತಿ ನೀಡಿದ್ದಾರೆ.  ಮುಸ್ಕಾನ್ ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಕುಟುಂಬದಿಂದ ಯಾರೂ ಮುಸ್ಕಾನ್ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ಬಂದಿಲ್ಲ ಎನ್ನಲಾಗಿದೆ.

27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಂದಿದ್ದರು. ಬಳಿಕ ದೇಹವನ್ನು ಕತ್ತರಿಸಿ ಡ್ರಮ್​ನೊಳಗಿಟ್ಟು ಸಿಮೆಂಟ್​ನಿಂದ ಸೀಲ್ ಮಾಡಿದ್ದರು. ಮೊದಲ ಯೋಜನೆ ಪ್ರಕಾರ, ಇಬ್ಬರು ಆರೋಪಿಗಳು ಶವವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಿ ಎಸೆಯಲು ಬಯಸಿದ್ದರು . ಮಾರ್ಚ್​ 3ರಂದು ಪತಿ ಸೌರಭ್ ರಜಪೂತ್​ನನ್ನು ಕೊಂದ ಬಳಿಕ ಪ್ರಿಯಕರ ಸಾಹಿಲ್ ಜತೆ 11 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಸುತ್ತಾಡಿದ್ದಳು.

Share Information