LATEST NEWS
ಮಾತುಕತೆಯ ಮೂಲಕ ಅಯೋಧ್ಯೆ.ಸಮಸ್ಯೆ ನಿವಾರಣೆ – ಪೇಜಾವರ ಶ್ರೀ
ಮಾತುಕತೆಯ ಮೂಲಕ ಅಯೋಧ್ಯೆ.ಸಮಸ್ಯೆ ನಿವಾರಣೆ – ಪೇಜಾವರ ಶ್ರೀ
ಉಡುಪಿ ನವೆಂಬರ್ 22: ಧರ್ಮ ಸಂಸದ್ ಗೆ ಉಡುಪಿಯಲ್ಲಿ ಎಲ್ಲಾ ಸಿದ್ಧತೆ ನಡೆದಿದೆ ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸಂಸದ್ ನಲ್ಲಿ ಮೂರು ಪ್ರಮುಖ ವಿಚಾರಗಳ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ರಾಮ ಮಂದಿರ ನಿರ್ಮಾಣ, ದೇಶದಲ್ಲಿ ಗೋಹತ್ಯಾ ನಿಷೇಧ, ಜಾತಿಗಳ ನಡುವಿನ ಅಸ್ಪೃಶ್ಯತಾ ನಿವಾರಣೆ ಇವು ಧರ್ಮ ಸಂಸದ್ ನ ಪ್ರಮುಖ ಚರ್ಚಾ ವಿಷಯಗಳಾಗಲಿವೆ ಎಂದು ಹೇಳಿದರು. ಈ ವಿಷಯಗಳ ಬಗ್ಗೆ ದೇಶದ ಉದ್ದಗಲದಿಂದ ಬಂದ ಸಂತರು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಮಜನ್ಮಭೂಮಿ ವಿವಾದದ ಬಗ್ಗೆ ಮಾತನಾಡಿದ ಪೇಜಾವರ ಶ್ರೀಗಳು ಸಮಸ್ಯೆ ನಿವಾರಣೆಗೆ ಮೂರು ಅವಕಾಶಗಳಿವೆ ಎಂದು ಹೇಳಿದರು. ಅವುಗಳಲ್ಲಿ ಒಂದು ಸರ್ಕಾರದ ನೇತೃತ್ವದಲ್ಲಿ ಸಂಧಾನ, ಎರಡನೇಯದು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯುವಿಕೆ, ಮೂರನೇಯದು ವಿಶೇಷ ವಿಧೇಯಕ ಮಂಡಿಸಿ ಸಮಸ್ಯೆ ನಿವಾರಣೆಗೆ ಯತ್ನ ಈ ಮೂರು ಅವಕಾಶಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಅಯೋಧ್ಯೆ ಸಮಸ್ಯೆ ನಿವಾರಣೆಗ ಕ್ರಮಕೈಗೊಳ್ಳಬಹುದು ಎಂದು ಹೇಳಿದರು.
ಈಗ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಇರುವ ಸರಕಾರಗಳು ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾದ ಸರಕಾರಗಳಿವೆ ಎಂದು ಹೇಳಿದ ಅವರು ಈ ಸಮಸ್ಯೆಯನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಬಹುದು ಎಂದರು,
ಧರ್ಮಸಂಸದ್ ನಲ್ಲಿ ಪಾಲ್ಗೊಳ್ಳುವ ಸಂತರು ಸಂತರು ಈ ಎಲ್ಲಾ ಆಯಾಮಗಳಲ್ಲಿ ಚರ್ಚೆ ಮಾಡಲಿದ್ದಾರೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.
You must be logged in to post a comment Login