ಮಂಗಳೂರಿನಲ್ಲಿ ಕೊಡಿಯಲ್ ತೇರ್ ಸಂಭ್ರಮ :ಕಣ್ತುಂಬಿದ್ದ ಭಕ್ತ ಸಾಗರ

ಮಂಗಳೂರು,ಫೆಬ್ರವರಿ 12 : ಮಂಗಳೂರಿನ ರಥಬೀದಿಯ ಇತಿಹಾಸ ಪ್ರಸಿದ್ದ ಶ್ರೀ ವೆಂಕಟರಮಣ ದೇವಸ್ಥಾನಲ್ಲಿ ಬೃಹ್ಮರಥೋತ್ಸವದ ಸಂಭ್ರಮ. ಕೊಡಿಯಲ್ ತೇರ್ ಎಂದೇ ಜನಜನಿತವಾಗಿರುವ ಈ ರಥೋತ್ಸ್ವದಲ್ಲಿ ಸಾವಿರಾರು ಭಕ್ತರು ದೇಶವಿದೇಶಗಳಿಂದ ಆಗಮಿಸಿ ಪಾಲ್ಗೊಂಡಿದ್ದರು.ಬ್ರಹ್ಮ ರಥೋತ್ಸವ ಶ್ರೀ ಕಾಶಿ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಹಸ್ರಾರು ಭಗವತ್ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಇದಕ್ಕೂ ಮುನ್ನ ರಥೋತ್ಸವ ಪ್ರಯುಕ್ತ ಶ್ರೀ ದೇವಳದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ , ಶತಕಲಶಾಭಿಷೇಕಗಳು ಶ್ರೀಗಳವರ ಅಮೃತ ಹಸ್ತ ಗಳಿಂದ ನೆರವೇರಿದವು , ಬಳಿಕ ಯಜ್ಞ ಮಂಟಪದಲ್ಲಿ ಶ್ರೀ ದೇವರು ಛಿತೈಸಿ ಯಜ್ಞ ದ ಲ್ಲಿ ಮಹಾ ಪೂರ್ಣಾಹುತಿ ಜರಗಿತು .ಈ ಪುಣ್ಯ ಪರ್ವದಂದು ಕಾಶಿ ಮಠಾಧೀಶರ ತಿರುಮಲ ಚಾತುರ್ಮಾಸ ದ ವಿಶೇಷ ಸ್ಮರಣ ಸಂಚಿಕೆ ಬಿಡುಗಡೆ ಶ್ರೀಗಳವರ ದಿವ್ಯ ಹಸ್ತ ಗಳಿಂದ ನೆರವೇರಿತು .

Facebook Comments

comments