ಬರೋಬ್ಬರಿ 23 KG ಬೆಳ್ಳಿ ಕದ್ದ ಕಳ್ಳನಿಗೆ ಒಂದೇ ಗಂಟೆಯೊಳಗೆ ಖಾಕಿ ಪಡೆ ಕಂಬಿ ಎಣಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು : ಬರೋಬ್ಬರಿ 23 KG ಬೆಳ್ಳಿ ಕದ್ದ ಕಳ್ಳನಿಗೆ ಒಂದೇ ಗಂಟೆಯೊಳಗೆ ಖಾಕಿ ಪಡೆ ಕಂಬಿ ಎಣಿಸಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಖತಾರ್ನಾಕ್ ಕಳ್ಳ ಆಯಾಜಿ ಚೌಧರಿ (43) ಬಂಧಿತ ಆರೋಪಿಯಾಗಿದ್ದು ಇದೀಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ. ನವೆಂಬರ್ 23ರ ಸಂಜೆ 7 ಗಂಟೆ ಸುಮಾರಿಗೆ ಈ ಕಳ್ಳತನ ನಡೆದಿತ್ತು. ಕೆಲಸಗಾರ ದ್ವಿಚಕ್ರ ವಾಹನದಲ್ಲಿ ಬೆಳ್ಳಿ ತರುತ್ತಿದ್ದ ವೇಳೆ ಆರೋಪಿ ಆಯಾಜಿ ಚೌಧರಿ ಬೆಳ್ಳಿ ಕದ್ದು ಎಸ್ಕೇಪ್ ಆಗಿದ್ದ. ಸಿಬ್ಬಂದಿ ವಾಹನದ ಡಿಕ್ಕಿಯಲ್ಲಿ ಮತ್ತು ಮುಂಭಾಗ ಇಟ್ಟಿದ್ದ ಬ್ಯಾಗ್ಗಳ ಪೈಕಿ ಮುಂಭಾಗದಲ್ಲಿದ್ದ 36 ಲಕ್ಷ ಮೌಲ್ಯದ 23 ಕೆ.ಜಿ. ಬೆಳ್ಳಿಯ ಬ್ಯಾಕ್ ಕದ್ದು ಪರಾರಿಯಾಗಿದ್ದ. ಬಂಧಿತ ಆರೋಪಿ ಆಯಾಜಿ ವಿರುದ್ದ ಕಾಟನ್ ಪೇಟೆ ಠಾಣೆಯಲ್ಲಿ ರೌಡಿಶೀಟರ್ ಜೊತೆಗೆ 50 ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



