BELTHANGADI
ಬೆಳ್ತಂಗಡಿಯಲ್ಲಿ ಉಚ್ಛಾಟಿತ ಸಿ.ಪಿ.ಐ.ಎಂ ಮುಖಂಡರಿಂದ ಕಮ್ಯುನಿಷ್ಟ್ ಸಮಾವೇಶ
ಬೆಳ್ತಂಗಡಿಯಲ್ಲಿ ಉಚ್ಛಾಟಿತ ಸಿ.ಪಿ.ಐ.ಎಂ ಮುಖಂಡರಿಂದ ಕಮ್ಯುೂನಿಷ್ಟ್ ಸಮಾವೇಶ
ಬೆಳ್ತಂಗಡಿ, ಎಪ್ರಿಲ್ 10 : ದಕ್ಷಿಣಕನ್ನಡ ಜಿಲ್ಲಾ ಕಮ್ಯುನಿಷ್ಟ ಪಾರ್ಟಿ ಆಫ್ ಇಂಡಿಯಾದಿಂದ ಉಚ್ಛಾಟನೆಗೊಳಗಾದ ಬೆಳ್ತಂಗಡಿಯ ಸಿ.ಪಿ.ಐ.ಎಂ ಮುಖಂಡ ಬಿ.ಎಂ.ಭಟ್ ನೇತೃತ್ವದಲ್ಲಿ ಇಂದು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಕಮ್ಯುೂನಿಷ್ಟರ ಸಮಾವೇಶ ನಡೆಯಿತು.
ರಾಜ್ಯ ಹಾಗೂ ಜಿಲ್ಲೆಯ ಕಮ್ಯುನಿಷ್ಟ್ ಪಕ್ಷದ ನಾಯಕತ್ವದಿಂದ ಬೇಸತ್ತು ಹೊರಬಂದ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬಿ.ಎಂ.ಭಟ್ ವಿರುದ್ಧ ದಕ್ಷಿಣಕನ್ನಡ ಜಿಲ್ಲಾ ಕಮ್ಯುೂನಿಷ್ಟ್ ಪಕ್ಷದ ನಾಯಕರು ಭ್ರಷ್ಟಾಚಾರ, ಅನೈತಿಕತೆ ಮೊದಲಾದ ದೂರು ಬಂದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು.
ಇದರಿಂದ ಪಕ್ಷದ ವಿರುದ್ಧ ತಿರುಗಿಬಿದ್ದ ಬಿ.ಎಂ.ಭಟ್ ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ಈ ಸಮಾವೇಶವನ್ನು ನಡೆಸುವ ಮೂಲಕ ಜಿಲ್ಲಾ ನಾಯಕರಿಗೆ ಸಡ್ಡು ಹೊಡೆದಿದ್ದಾರೆ.
ಬಿ.ಎಂ.ಭಟ್ ಜೊತೆ ಬೆಳ್ತಂಗಡಿ ತಾಲೂಕಿನ ಸುಮಾರು 252 ಸಿ.ಪಿ.ಐ.ಎಂ ಕಾರ್ಯಕರ್ತರೂ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತಟಸ್ಥರಾಗಿದ್ದಾರೆ.
ಪಕ್ಷದ ಜಿಲ್ಲಾ ನಾಯಕರು ಸೂಚಿಸುವ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ಬಿ.ಎಂ.ಭಟ್ ಹಾಗೂ ಸಂಗಡಿಗರು ಈಗಾಗಲೇ ನಿರ್ಧರಿಸಿದ್ದು, ರಾಜ್ಯ ನಾಯಕರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಸಮಾವೇಶದಲ್ಲಿ ಸುಮಾರು 170 ರಷ್ಟು ಬಿ.ಎಂ.ಭಟ್ ಬೆಂಬಲಿಗರು ಭಾಗವಹಿಸಿದ್ದರು.
You must be logged in to post a comment Login