LATEST NEWS
ಬಶೀರ್ ಅವರ ಮೇಲಿನ ಹಲ್ಲೆ ದೃಶ್ಯ ವೀಡಿಯೊ ಸೋರಿಕೆ: ತನಿಖೆಗೆ ಪೋಲಿಸ್ ಕಮಿಷನರ್ ಆದೇಶ
ಬಶೀರ್ ಅವರ ಮೇಲಿನ ಹಲ್ಲೆ ದೃಶ್ಯ ವೀಡಿಯೊ ಸೋರಿಕೆ: ತನಿಖೆಗೆ ಪೋಲಿಸ್ ಕಮಿಷನರ್ ಆದೇಶ
ಮಂಗಳೂರು, ಜನವರಿ 06: ಕೊಟ್ಟಾರಚೌಕಿಯಲ್ಲಿ ಬಶೀರ್ ಅವರ ಮೇಲಿನ ಹಲ್ಲೆ ದೃಶ್ಯ ಶುಕ್ರವಾರ ರಾಜ್ಯದ ಕೆಲವು ವಾಹಿನಿಗಳಲ್ಲಿ ಪ್ರಸಾರವಾಗಿದೆ.
ಇದು ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ಆಗಿದ್ದು, ಸೋರಿಕೆಯಾದ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರಗಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ತಿಳಿಸಿದ್ದಾರೆ.
ಕೊಟ್ಟಾರಚೌಕಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಳವಡಿಸಿದ ಸಿಸಿ ಕೆಮರಾದಲ್ಲಿ ಹಲ್ಲೆ ದೃಶ್ಯ ಸೆರೆಯಾಗಿತ್ತು.
ಗುರುವಾರ ಮಧ್ಯಾಹ್ನ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದರು. ಈ ಸಿಸಿಟಿವಿ ಫೂಟೇಜ್ ಪೊಲೀಸ್ ಇಲಾಖೆ ವಶಕ್ಕೆ ಬಂದ ಬಳಿಕ ಸೋರಿಕೆಯಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು.
ಒಂದು ವೇಳೆ ಇಲಾಖಾ ಸಿಬಂದಿಗಳು ಶಾಮೀಲಾಗಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದು ಎಂದು ಕಮಿಷನರ್ ಹೇಳಿದ್ದಾರೆ.
You must be logged in to post a comment Login