ಕರೆಂಟ್ ರಿಪೇರಿಗೆ ಎಂದು ಮನೆಗೆ ಬಂದವ ಸಾವಿರಾರೂ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ, 

ಬಂಟ್ವಾಳ: ಕರೆಂಟ್ ರಿಪೇರಿಗೆ ಎಂದು ಮನೆಗೆ ಬಂದವ ಸಾವಿರಾರೂ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ,

ಇಲ್ಲಿನ ಸಜೀಪನಡು ಗ್ರಾಮದ ಈ ಘಟನೆ ನಡೆದಿದ್ದು ದೇರಾಜೆಯ ದೀಕ್ಷಿತ್ ಅವರ ಮನೆಗೆ ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿ ಬಳಿಕ ಪರಾರಿಯಾಗಿದ್ದಾನೆ.

ಮನೆಯಲ್ಲಿ ಸರೋಜಿನಿ ಎನ್ನುವ ಮಹಿಳೆಯನ್ನು ನಿಲ್ಲಿಸಿ ಮನೆಮಂದಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು.  ಮಧ್ಯಾಹ್ನ 2 ರ ಸುಮಾರಿಗೆ ಮನೆಗೆ ಬಂದ  ಅಪರಿಚಿತ ವ್ಯಕ್ತಿ ದೀಕ್ಷಿತ್ ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು. ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿ ಬಳಿಕ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information