Home DAKSHINA KANNADA

ಪುತ್ತೂರು : ಕೆಟ್ಟು ಕೈಕೊಟ್ಟ ವಾಹನ, ಅಕ್ರಮ ಗೋವುಗಳನ್ನು ನಡು ರಸ್ತೆಯಲ್ಲೇ ಬಿಟ್ಟು ಗೋಕಳ್ಳರು ಪರಾರಿ..!

ಏಕಾಏಕಿ ವಾಹನ ಕೆಟ್ಟು ಕೈಕೊಟ್ಟ ಕಾರಣ ವಾಹದಲ್ಲಿದ್ದ ಅಕ್ರಮ ಗೋವುಗಳನ್ನು ಅಲ್ಲೇ ಇಳಿಸಿ ಗೋ ಕಳ್ಳರು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಲ್ಲಿ ನಡೆದಿದೆ. 
ಪುತ್ತೂರು :  ಏಕಾಏಕಿ ವಾಹನ ಕೆಟ್ಟು ಕೈಕೊಟ್ಟ ಕಾರಣ ವಾಹದಲ್ಲಿದ್ದ ಅಕ್ರಮ ಗೋವುಗಳನ್ನು ಅಲ್ಲೇ ಇಳಿಸಿ ಗೋ ಕಳ್ಳರು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. 
ಗೋವುಗಳನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ಗೋ ಸಾಗಾಟಗಾರರ ವಿರುದ್ದ ಕ್ರಮಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಪೊಲೀಸರಿಗೆ ದೂರು ನೀಡಿದೆ. 
ಪುತ್ತೂರು ತಾಲೂಕಿನ  ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ಇಂದು ಶನಿವಾರ ಮುಂಜಾನೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದೆ. ಅಕ್ರಮ ಗೋ ಸಾಗಾಟ ಮಾಡುವ ಸಂದರ್ಭ ವಾಹನ ಕೆಟ್ಟು ಹೋಗಿದೆ ಎಂದು ಗೋವುಗಳನ್ನು ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮಾಹಿ ಪಡೆದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನ ಕಾರ್ಯಕರ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ವಾರಿಸುದಾರರಿಲ್ಲದ ಈ ಗೋವುಗಳನ್ನು ಕಳವು ಮಾಡಿ ಸಾಗಾಟ ಮಾಡಿರುವ ಸಂಶಯ ವ್ಯಕ್ತವಾಗಿದ್ದು, ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ಆಗ್ರಹಿಸಿದೆ.

Facebook
Share Information