ಪರರಿಗೆ ಮಾದರಿಯಾದ ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು, ಮಾರ್ಚ್ 06 : ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ವೈಕ್ತಿತ್ವದಲ್ಲಿ ಎಲ್ಲರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತಿದ್ದಾರೆ. ಕಾರಣ ದಿನವೂ ಏನಾದರೂ ಹೊಸತನ ಮತ್ತು ಏನೇ ಮಾಡಿದರೂ ಜನರಿಗೆ ಉಪಕಾರವಾಗುವಂತಿರಬೇಕೆಂದು ತುಡಿತ ಅವರದ್ದು.

ಆದ್ದರಿಂದ ಈ ಬಾರಿ ತೀರ ವಿಭಿನ್ನ ಹೊಸ ಮನವಿಯನ್ನು ತನ್ನ ಕ್ಷೇತ್ರದ ಜನರಲ್ಲಿ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಅವರದೇ ಮಾತುಗಳಲ್ಲಿ ಕೇಳೋಣ. ” ನನ್ನ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ನಾಗರಿಕ ಬಂಧುಗಳಲ್ಲಿ ವಿನಂತಿ. ಶಾಸಕನ ನೆಲೆಯಲ್ಲಿ ನಾನು ಅನೇಕ ಕಾರ್ಯಕ್ರಮಗಳಲ್ಲಿ ನಿಮ್ಮೊಂದಿಗೆ ಭಾಗವಹಿಸುತ್ತಿದ್ದೇನೆ. ನಿಮ್ಮ ಗೌರವಪೂರ್ವಕವಾಗಿ ಹೂ ಹಾರ, ಹೂಗುಚ್ಚ, ಸ್ಮರಣಿಕೆ ಕೊಡುತ್ತೀರಿ. ನಿಮ್ಮ ಪ್ರೀತಿಗೆ ಆಭಾರಿಯಾಗಿದ್ದೇನೆ. ಆದರೆ ಹೂಹಾರ, ಬೊಕ್ಕೆಗಳನ್ನು ಕೊಡುವುದಕ್ಕಿಂತ ತಾವು ನೋಟ್ ಬುಕ್ ಗಳನ್ನು ಕೊಟ್ಟರೆ ಅವುಗಳನ್ನು ಸಂಗ್ರಹಿಸಿ ಶಾಲಾ ಮಕ್ಕಳಿಗೆ ಕೊಡಬಹುದು. ಅವು ಹಾಳಾಗುವುದಿಲ್ಲ ಮತ್ತು ವ್ಯರ್ಥವೂ ಆಗುವುದಿಲ್ಲ.
ಇನ್ನು ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಪ್ರಚಾರದ ನಿಮಿತ್ತ ನಾನು ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಸಂಚರಿಸಲಿದ್ದೇನೆ. ನಾನು ನಮ್ಮ ಕಾರ್ಯಕರ್ತರಲ್ಲಿ ವಿನಂತಿ ಮಾಡುವುದೇನೆಂದರೆ ನಾನು ಬೆಳಿಗ್ಗೆಯಿಂದ ರಾತ್ರಿ ತನಕ ವಿವಿಧ ವಾರ್ಡ್, ಗ್ರಾಮಗಳಲ್ಲಿ ಬರುವಾಗ ಎಲ್ಲೆಲ್ಲಿ ಕಾರ್ನರ್ ಮೀಟಿಂಗ್, ಸಭೆ, ಮನೆಮನೆ ಪ್ರಚಾರ ನಡೆಯುವ ಏರಿಯಾಗಳಲ್ಲಿ ಒಂದೊಂದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಚುನಾವಣಾ ಪ್ರಚಾರ ನಡೆಸೋಣ. ಈ ಮೂಲಕ ನರೇಂದ್ರ ಮೋದಿಜಿಯವರ ಪರಿಸರ ಕಾಳಜಿಗಾಗಿ ತೆಗೆದುಕೊಂಡಿರುವ ನಿರ್ಧಾರಗಳನ್ನು ಬೆಂಬಲಿಸೋಣ. ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಇದನ್ನು ಅನುಷ್ಟಾನಕ್ಕೆ ತರುವಲ್ಲಿ ನನ್ನೊಡನೆ ಕೈಜೋಡಿಸುತ್ತಿರಿ ಎಂದು ಅಂದುಕೊಂಡಿದ್ದೇನೆ ‘ ಇದು ಭರತ್ ಶೆಟ್ಟಿ ಅವರ ಕಳಕಳಿಯ ಮನವಿ. ಭರತ್ ಶೆಟ್ಟಿ ಅವರ ಈ ನಡೆ ದುಂದು ವೆಚ್ಚ ಮಾಡಿ ಸಾರ್ಜನಿಕ, ಪರಿಸರ, ಸಮಯ ಇತ್ಯಾದಿಗಳನ್ನು ಹಾಳು ಮಾಡಿ ಕಾಲ ಕಳೆಯುವ ಮಂದಿಗೆ ಒಂದು ಮಾದರಿಯಾಗಿದೆ.

Facebook Comments

comments