ಮಂಗಳೂರು ಅಗಸ್ಟ್ 7 : ಮಳೆಗಾಲದಲ್ಲಿ ನೇತ್ರಾವತಿ ನದಿಯಿಂದ ಸಮುದ್ರ ಸೇರುವ ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ತರುವ ಪ್ರಸ್ತಾವ ವೊಂದು ಸರಕಾರಕ್ಕೆ ಸಲ್ಲಿಕೆಯಾಗಿದ್ದು ಯೋಜನೆಯ ಕುರಿತ ಸಾಧ್ಯತೆ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಸೋಮವಾರ ಜಲಮಂಡಳಿಗೆ ಸಲ್ಲಿಸಿದ್ದಾರೆ ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೋಮವಾರ ಜಲಮಂಡಳಿಗೆ ಸಲ್ಲಿಸಿದ್ದಾರೆ.

ಜಲ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಐಎಸ್ಸಿ ವಿಜ್ಞಾನಿಗಳು ಸಿದ್ಧಪಡಿಸಿರುವ ಸಾಧ್ಯತಾ ವರದಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹಾಗೂ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ.
ಜತೆಗೆ ಪ್ರಾತ್ಯಕ್ಷಿಕೆ ಮೂಲಕ ಯೋಜನೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ನೇತ್ರಾವತಿ ನದಿಯಿಂದ ಸುಮಾರು ಮುನ್ನೂರ ಐವತ್ತು ಟಿಎಂಸಿಯಷ್ಟು ಮಳೆ ನೀರು ದೊರೆಯಲಿದ್ದು ಈ ನೀರು ಸಮುದ್ರಕ್ಕೆ ಸೇರುತ್ತಿದೆ .ಈ ನೀರನ್ನು ಜಲಾಶಯದ ಮೂಲಕ ಸಂಗ್ರಹಿಸಿ ಬೆಂಗಳೂರಿಗೆ ನಲವತ್ತು ಟಿಎಂಸಿ ನೀರು ತರಬಹುದು ಎಂದು ಉಲ್ಲೇಖಿಸಲಾಗಿದೆ.

ಸದ್ಯ ಕಾವೇರಿ ಜಲಾನಯನ ಪ್ರದೇಶದಿಂದ ದಿನವೂ ಬೆಂಗಳೂರಿಗೆ ತರಲಾಗುತ್ತಿರುವ ಒಂದು ಕಿಲೋ ಲೀಟರ್ ನೀರಿಗೆ ಮೂವತ್ತು ಎರಡು ರೂಪಾಯಿ ವೆಚ್ಚವಾಗುತ್ತಿದೆ .ಆದರೆ ನೇತ್ರಾವತಿ ನದಿಯಿಂದ ಸಮುದ್ರಕ್ಕೆ ಸೇರುವ ನೀರು ಜಲಾಶಯ ನಿರ್ಮಿಸಿ ಮಾರ್ಗ ಪರಿವರ್ತನೆ ಮೂಲಕ ಬೆಂಗಳೂರಿಗೆ ತಂದರೆ ಒಂದು ಕಿಲೋ ಲೀಟರ್ ನೀರಿಗೆ ನಲವತ್ತು ಎರಡು ರೂಪಾಯಿ ವೆಚ್ಚವಾಗಲಿದೆ .ಯೋಜನೆಯಿಂದ ಮಂಗಳೂರು ಸಹಿತ ಮಾರ್ಗ ಮಧ್ಯೆ ಬರುವ ಇತರ ಭಾಗಗಳಿಗೂ ನೀರು ಪೂರೈಕೆ ಮಾಡಬಹುದು ಎಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ನೇತ್ರಾವತಿ ನದಿಗೆ ಅಡ್ಡಲಾಗಿ ಸಮುದ್ರದ ಸಮೀಪ ಜಲಾಶಯ ನಿರ್ಮಿಸಲು ಸಾವಿರಾರು ಎಕರೆಯಷ್ಟು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ .ಇದರಿಂದ ಸ್ಥಳೀಯರು ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ ಜತೆಗೆ ಯೋಜನೆಯಿಂದ ಮೀನುಗಾರಿಕೆಗೆ ತೊಂದರೆಯಾಗುವ ಸಾಧ್ಯತೆ ಇದ್ದು ಯೋಜನೆ ಅನುಷ್ಠಾನಗೊಳಿಸುವುದು ಕಷ್ಟ ಸಾಧ್ಯ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದಿದೆ.

ಯೋಜನೆಗೆ ಐಐಎಸ್ಸಿ ವಿಜ್ಞಾನಿಗಳಿಂದಲೇ ವಿರೋಧ

ನೇತ್ರಾವತಿ ನದಿಯ ನೀರನ್ನು ರಾಜಧಾನಿಗೆ ಪೂರೈಸುವ ಯೋಜನೆಗೆ ಐಐಎಸ್ಸಿ ವಿಜ್ಞಾನಿಗಳಿಂದಲೇ ವಿರೋಧ ವ್ಯಕ್ತವಾಗಿದೆ. ಪಶ್ಚಿಮಘಟ್ಟದಿಂದ ಬೆಂಗಳೂರಿಗೆ ನೀರನ್ನು ತರುವುದು ಮೂರ್ಖತನ’ ಎಂದು ಐಐಎಸ್ಸಿ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ. ಟಿ.ವಿ.ರಾಮಚಂದ್ರ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ಯಥೇಚ್ಛ ಪ್ರಮಾಣದ ಮಳೆನೀರು ಲಭ್ಯ. ನಗರಕ್ಕೆ ವರ್ಷಕ್ಕೆ ಬೇಕಿರುವುದು 17 ಟಿಎಂಸಿ ಅಡಿಗಳಷ್ಟು ನೀರು ಮಾತ್ರ. ಆದರೆ, ಇಲ್ಲಿ ವರ್ಷದಲ್ಲಿ 750 ಟಿಎಂಸಿ ಅಡಿಗಳಷ್ಟು ಮಳೆನೀರು ಸಿಗುತ್ತಿದೆ. ಇಲ್ಲಿ ವ್ಯರ್ಥವಾಗುತ್ತಿರುವ ತ್ಯಾಜ್ಯನೀರಿನ ಪ್ರಮಾಣವೇ 18ರಿಂದ 20 ಟಿಎಂಸಿ ಅಡಿಗಳಷ್ಟಿದೆ.ಈ ಪೈಕಿ 16 ಟಿಂಎಸಿ ಅಡಿಗಳಷ್ಟು ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಿದರೆ ಹಾಗೂ ಇಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ನಮಗೆ ಪಶ್ಚಿಮಘಟ್ಟದಿಂದ ನೀರನ್ನು ತರಿಸುವ ಪ್ರಮೇಯವೇ ಎದುರಾಗದು’ ಎಂದು ಅವರು ತಿಳಿಸಿದರು.

2 Shares

Facebook Comments

comments