ನೆಲ್ಯಾಡಿಯಲ್ಲಿ ಲಾರಿ ದರೋಡೆ :ಚಾಲಕನನನ್ನು ಹೊಡೆದು ನಗದಿನೊಂದಿಗೆ ಪರಾರಿ

ಪುತ್ತೂರು, ಮಾರ್ಚ್ 25 :ಲಾರಿ ಚಾಲಕನನ್ನು ಅಡ್ಡ ಗಟ್ಟಿ ದರೋಡೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಗೋಳಿತೊಟ್ಟು ಎಂಬಲ್ಲಿ ಸಂಭವಿಸಿದೆ.

ನಿನ್ನೆ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ.

ಕಾರಿನಲ್ಲಿ ಬಂದ ಮೂವರು ದರೋಡೆಕೋರರ ತಂಡ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಹೊಡೆದು ಲಾರಿ ಚಾಲಕನ ಬಳಿಯಿದ್ದ ಐದು ಸಾವಿರ ನಗದು ಹಾಗೂ ಇತರ ಸೊತ್ತುಗಳನ್ನು ದರೋಡೆ ಮಾಡಿದ್ದಾರೆ.

ಉಪ್ಪಿನಂಗಡಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

23 Shares

Facebook Comments

comments