Connect with us

    LATEST NEWS

    ನಿಶ್ಚಿತಾರ್ಥಕ್ಕೆ ನೀತಿ ಸಂಹಿತೆಯ ಬಿಸಿ : ಮನೆಯ ಯಜಮಾನ ಜೈಲಿಗೆ

    ನಿಶ್ಚಿತಾರ್ಥಕ್ಕೆ ನೀತಿ ಸಂಹಿತೆಯ ಬಿಸಿ : ಮನೆಯ ಯಜಮಾನ ಜೈಲಿಗೆ

    ಮಂಗಳೂರು, ಎಪ್ರಿಲ್ 15 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಅಧಿಕಾರಿಗಳು ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದಾರೆ. ಶನಿವಾರ ಬಂಟ್ವಾಳ ತಾಲೂಕು ಇರಾ ಗ್ರಾಮದ ಮನೆ ಯೊಂದರಲ್ಲಿ ವಿವಾಹ ನಿಶ್ಚಿತಾರ್ಥ ನಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಮದ್ಯ ಶೇಖರಣೆಯ ಹಿನ್ನೆಲೆಯಲ್ಲಿ ಮನೆಯೊಡೆಯನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಘಟನೆಯ ವಿವರ:

    ಶನಿವಾರ ಮಧ್ಯಾಹ್ನ ಸ್ಟೀವನ್‌ ಅವರ ಮನೆಯಲ್ಲಿ ಅಣ್ಣನ ಪುತ್ರಿಯ ವಿವಾಹ ನಿಶ್ಚಿತಾರ್ಥ ನಿಗದಿಯಾಗಿತ್ತು.

    ಕಾರ್ಯಕ್ರಮ ನಡೆಯುತ್ತಿದ್ದಂತೆ  ಏಕಾಎಕಿ ಅಬಕಾರಿ ಅಧಿಕಾರಗಳು ದಾಳಿ ನಡೆಸಿದ್ದಾರೆ.

    ದಾಳಿ ಸಂದರ್ಭದಲ್ಲಿ ಅಧಿಕಾರಿಗಳು ಮದ್ಯ ಶೇಖರಣೆ ಇರುವುದನ್ನು ಪತ್ತೆ ಹಚ್ಚಿ ಸ್ಟೀವನ್‌ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು.

    ನಂತರ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದಾಗ ನ್ಯಾಯಾಲಯ ಅವರಿಗೆ ಜಾಮೀನು ಕೂಡ ನಿರಾಕರಿಸಿದೆ.

    ಪರಿಣಾಮ ಅನಿವಾರ್ಯವಾಗಿ ಜೈಲು ಸೇರುವಂತಾಗಿದೆ.

    ಚುನಾವಣಾ ನೀತಿ ಸಂಹಿತೆಯ ಮಾಹಿತಿ ಜನರಿಗಿಲ್ಲ :

    ಚುನಾವಣ ನೀತಿ ಸಂಹಿತೆಯ ಬಗ್ಗೆ ಜನರಿಗೆ ಸಾಕಷ್ಟು ಮಾಹಿತಿ ಜನರಿಗೆ ಇಲ್ಲದೆ ಇರುವುದರಿಂದ ಹಾಗೂ ಮಾಹಿತಿಯನ್ನು ಅಧಿಕಾರಿಗಳು ನೀಡ ದಿರುವುದು ಇಂತಹ ಘಟನೆಗಳು ನಡೆಯಲು ಕಾರಣವಾಗಿದೆ.

    ಈ ಪ್ರಕರಣದ ಕುರಿತು ಪೊಲೀಸ್‌ ಠಾಣೆಯಲ್ಲೂ ಯಾವುದೇ ಮಾಹಿತಿಯಿಲ್ಲ. ಚುನಾವಣ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿ ಅಬಕಾರಿ ಇಲಾಖೆಯ ಅಧಿಕಾರಿಳು ಮೇಲಾಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಯವಿಗಾಗಲಿ ಮಾಹಿತಿ ನೀಡಿಲ್ಲ.

    ಬದಲಿಗೆ ಅಬಕಾರಿ ಅಧಿಕಾರಿಗಳೇ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

    ಚುನಾವಣ ನೀತಿ ಸಂಹಿತೆ ಸಂದರ್ಭ ವಿವಾಹ ನಿಶ್ಚಿತಾರ್ಥ ಸಮಾರಂಭಕ್ಕೆ ಸಂಬಂಧಿಸಿ ಮನೆಯ ಯಜಮಾನ ಜೈಲಿಗೆ ಹೋಗಿರುವುದು ಜಿಲ್ಲೆಯಲ್ಲಿ ಪ್ರಥಮ ಘಟನೆಯಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply