‘ದೈವಿಕ ಗರ್ಭ’ದ ನಂಬಿಕೆ ಮೂಡಿಸಿ ಮಹಿಳೆಯನ್ನು ಪುಸಲಾಯಿಸಿ ಅತ್ಯಾಚಾರ  ಎಸಗಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ :‘ದೈವಿಕ ಗರ್ಭ’ದ ನಂಬಿಕೆ ಮೂಡಿಸಿ ಮಹಿಳೆಯನ್ನು ಪುಸಲಾಯಿಸಿ ಅತ್ಯಾಚಾರ  ಎಸಗಿದ್ದ ನಕಲಿ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ.

. ಕಳಕ್ಕವು ಉದಿರಾಂಪೊಯಿಲ್ ನಿವಾಸಿ ಸಾಜಿಲ್ (36) ಬಂಧಿತ ಆರೋಪಿಯಾಗಿದ್ದಾನೆ. ಸಂತ್ರಸ್ಥೆ ನೀಡಿದ ದೂರು ಆಧಾರಿಸಿ ಕೊಳತ್ತೂರು ಪೊಲೀಸರು ಈ ನಕಲಿ ಬಾಬಾನನ್ನು ಬಂಧಿಸಿದ್ದಾರೆ.‘ದೈವಿಕ ಗರ್ಭ’ದ ನಂಬಿಕೆ ಮೂಡಿಸಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ತಲೆಮರೆಸಿಕೊಂಡಿದ್ದ. ಬಳಿಕ ಕಾರ್ಯಾಚರಣೆ ನಡೆಸಿದ ಕೊಳತ್ತೂರು ಪೊಲೀಸರು ತಿರುವನಂತಪುರಂನ ನೆಡುಮಂಗಡದಲ್ಲಿ ಈತನನ್ನು ಬಂಧಿಸಿದ್ದಾರೆ.

ಈ ನಕಲಿ ಬಾಬಾ ಸಾಜಿಲ್ ‘ಮಿರಾಕಲ್ ಪಾತ್’ ಎಂಬ ಯೂಟ್ಯೂಬ್ ಚಾನೆಲ್ ಹೊಂದಿದ್ದ. ಕೊಳತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈತ ಯೂಟ್ಯೂಬ್ ಚಾನೆಲ್ ಮೂಲಕ ಪರಿಚವಾದ ಮಹಿಳೆಯನ್ನು ಭೇಟಿಯಾಗಿದ್ದ. ವಾಮಾಚಾರವನ್ನು ಅಭ್ಯಾಸ ಮಾಡುವ ವ್ಯಕ್ತಿ ನಾನು ಎಂದು ನಂಬಿಸಿ ಆಕೆಯೊಂದಿಗೆ ಸಂಬಂಧವನ್ನು ಸ್ಥಾಪಿಸಿದ್ದನು. ಬಳಿಕ ಮಹಿಳೆ ಉಳಿದುಕೊಂಡಿದ್ದ ಕ್ವಾರ್ಟರ್ಸ್ ಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಪರಾರಿಯಾಗಿದ್ದ.
ಕೇರಳದ ಕಲ್ಪಕಂಚೆರಿ ಪೊಲೀಸ್ ಠಾಣೆಯಲ್ಲೂ ಇದೇ ರೀತಿಯ ಪ್ರಕರಣದಲ್ಲಿ ಸಾಜಿಲ್ ಆರೋಪಿಯಾಗಿದ್ದಾನೆ. ಕಲ್ಪಕಂಚೆರಿ ಪ್ರಕರಣದಲ್ಲಿ ದೂರುದಾರರ ಹತ್ತಿರದ ಸಂಬಂಧಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಂತಹ ಅನೇಕ ಅತ್ಯಾಚಾರ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ  ಸಂಶಯವಿರುವುದರಿಂದ ಪೊಲೀಸರು ವಿಸ್ತ್ರತ ತನಿಖೆ ಆರಂಭಿಸಿದ್ದಾರೆ.

 

Share Information