ದ.ಕ. ಚುನಾವಣಾದ ಬಿಸಿ –  ನಳಿನ್ ಕುಮಾರ್ ಕಟೀಲರಿಂದ ಟೆಂಪಲ್ ರನ್ 

ಮಂಗಳೂರು, ಮಾರ್ಚ್  27 :ದೆಲ್ಲೆಡೆ ಲೋಕಸಭಾ ಚುನಾವಣ ಕಣ ರಂಗೇರಿದ್ದು, ರಾಜ್ಯದಲ್ಲೂ ಆಯಾ ಪಕ್ಷಗಳ ಅಭ್ಯರ್ಥಿಗಳು ಮತಬೇಟೆಯಲ್ಲಿ ನಿರತರಾಗಿದ್ದಾರೆ.

ಇನ್ನು, ಕರಾವಳಿಯ ದ.ಕ ಜಿಲ್ಲೆಯಲ್ಲೂ ಚುನಾವಣಾ ಪ್ರಚಾರದ ಅಬ್ಬರ ಗರಿಗೆದರಿದ್ದು, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ದ.ಕ .ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್ ಸೇರಿದಂತೆ ಬಿಜೆಪಿ ಸದಸ್ಯರು, ಕಾರ್ಯಕರ್ತರೊಂದಿಗೆ ಇಂದು ಮಂಗಳೂರಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.

ನಗರದ ಕೊಟ್ಟಾರದಲ್ಲಿರೋ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿಯಿಂದ ಆರಂಭಗೊಂಡ ನಳಿನ್ ಅವರ ಟೆಂಪಲ್ ರನ್ ಮಂಗಳದೇವಿ ದೇವಸ್ಥಾನದಲ್ಲಿ ಸಮಾಪನಗೊಂಡಿದೆ.

ಬೋಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಮಾರಿಯಮ್ಮಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ್ರು

. ನಂತರ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶರಭೇಶ್ವರನಿಗೆ ಹಾಗೂ ಮಹಾಗಣಪತಿ ದೇವರಿಗೆ ನಮನ ಸಲ್ಲಿಸಿದ್ರು. ಅಲ್ಲಿಂದ ಬಳಿಕ ಮಂಗಳಾದೇವಿ ದೇವಾಲಯಕ್ಕೆ ಭೇಟಿ ನೀಡಿದ ಅವರು ಮಂಗಳಾಂಬಿಕೆಯ ದರ್ಶನ ಪಡೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

7 Shares

Facebook Comments

comments