DAKSHINA KANNADA
ದೀಪಕ್ ಕುಟುಂಬಕ್ಕೆ ಸರಕಾರ 25 ಲಕ್ಷ ಪರಿಹಾರ ನೀಡಬೇಕು- ಸಿ.ಟಿ. ರವಿ
ದೀಪಕ್ ಕುಟುಂಬಕ್ಕೆ ಸರಕಾರ 25 ಲಕ್ಷ ಪರಿಹಾರ ನೀಡಬೇಕು- ಸಿ.ಟಿ. ರವಿ
ಮಂಗಳೂರು, ಜನವರಿ 3: ಮಂಗಳೂರು ಹೊರವಲಯದ ಸುರತ್ಕಲ್ ನ ಕಾಟಿಪಳ್ಳದಲ್ಲಿ ದುರ್ಷರ್ಮಿಗಳಿಂದ ಹತ್ಯೆಯಾದ ದೀಪಕ್ ಮೃತದೇಹ ಇದೀಗ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಇಡಲಾಗಿದೆ.
ಇದೀಗ ಹಿಂದೂ ಮುಖಂಡರು ಹಾಗೂ ಜನಪ್ರತಿನಿಧಿಗಳು ಮೃತದೇಹ ವೀಕ್ಷಿಸಲು ಬರುತ್ತಿದ್ದಾರೆ.
ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ಮುಖಂಡ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಮೃತನ ದೀಪಕ್ ಕುಟುಂಬಕ್ಕೆ 25 ಲಕ್ಷ ಪರಿಹಾರವನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಸರಣಿ ಕೊಲೆಗಳು ನಿರಂತರವಾಗಿ ನಡೆಯುತ್ತಿದೆ.
ತರಭೇತಿ ಪಡೆದಿರುವ ದುರ್ಷರ್ಮಿಗಳಿಂದಲೇ ಈ ರೀತಿಯ ಕೊಲೆ ಮಾಡಲು ಸಾಧ್ಯ ಎಂದ ಅವರು ಕಾಂಗ್ರೇಸ್ ನ ಓಟ್ ಬ್ಯಾಂಕ್ ನೀತಿಯೇ ಈ ಕೊಲೆಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದನಕಳ್ಳ ಕಬೀರ್ ಸಾವಾದಾಗ ಆತನ ಮನೆಗೆ ತೆರಳಿ ಪರಿಹಾರ ನೀಡಿದ್ದ ಸರಕಾರ ಹಿಂದೂಗಳ ನಿರಂತರ ಕೊಲೆಯಾದರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ದೀಪಕ್ ಹತ್ಯೆಗೆ ಕಾರಣರಾದವರನ್ನು ಶೀರ್ಘ ಬಂಧಿಸಬೇಕು ಎಂದು ಅವರು ಪೋಲೀಸ್ ಇಲಾಖೆಯನ್ನು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
You must be logged in to post a comment Login