Connect with us

    LATEST NEWS

    ಜೈಲಿಗೆ ನುಗ್ಗಿದ ಪೊಲೀಸರು – ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ

    ಜೈಲಿಗೆ ನುಗ್ಗಿದ ಪೊಲೀಸರು – ಅಪಾರ ಪ್ರಮಾಣದ ಮಾದಕ ವಸ್ತು ಪತ್ತೆ

    ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ಜೈಲಿಗೆ ಬೆಳ್ಳಂಬೆಳಿಗ್ಗೆ ಪೊಲೀಸ್ ದಾಳಿ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಜೈಲಿನೊಳಗೆ ಶೋಧಕಾರ್ಯ ಆರಂಭಿಸಿದ್ದಾರೆ. ಜೈಲಿನಲ್ಲಿ ಮಾರಕಾಸ್ತ್ರಗಳು ನುಸುಳಿರುವ ಮಾಹಿತಿ ಹಿನ್ನೆಲೆ ಯಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.

    ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ 130 ಕ್ಕಿಂತ ಅಧಿಕ ಪೊಲೀಸರು ದಾಳಿ ನಡೆಸಿದ್ದು ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿದೆ.

    ಗಾಂಜಾ,ಹುಕ್ಕಾ,ಡ್ರಗ್ಸ್ ಸಿರಿಂಜ್ ಸೇರಿದಂತೆ, ಹಲ್ಲೆಗೆ ಬಳಸುವ ಮಾರಾಕಾಯುಧಗಳು ದಾಳಿ ವೇಳೆ ಪತ್ತೆಯಾಗಿವೆ. ಕಬ್ಬಿಣ ದ ರಾಡ್, ಚೂರಿ, ಅಲ್ಯೂಮಿನಿಯಂ ಪಂಚ್ ರಿಂಗ್ ಗಳು ಖೈದಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಜೈಲಿನೊಳಗೆ ಮೊಬೈಲ್ ಸಂಪರ್ಕ ಇರುವುದಕ್ಕೆ ಸಾಕ್ಷಿಯಾಗಿ ಮೊಬೈಲ್ ಮತ್ತು ಪವರ್ ಬ್ಯಾಂಕ್ ಗಳನ್ನು ಖೈದಿಗಳಿಂದ ವಶಪಡಿಸಿಕೊಳ್ಳಲಾಗಿದೆ. 50 ಅಧಿಕಾರಿಗಳು, 4  ಎಸಿಪಿ ಸೇರಿದಂತೆ 130 ಅಧಿಕಾರಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು

    VIDEO

    Share Information
    Advertisement
    Click to comment

    You must be logged in to post a comment Login

    Leave a Reply