Connect with us

MANGALORE

ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪುಜಾರಿಯವರ ಆರೋಗ್ಯ ವಿಚಾರಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ನ ಹಿರಿಯ ಮುಖಂಡ ಜನಾರ್ದನ ಪುಜಾರಿಯವರ ಆರೋಗ್ಯ ವಿಚಾರಿಸಿದ ಸಂಸದ ನಳಿನ್ ಕುಮಾರ್ ಕಟೀಲ್

ಮಂಗಳೂರು ನವೆಂಬರ್ 19: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಇಂದು ಶ್ರೀಕ್ಷೇತ್ರಕ್ಕೆ ಬಿಲ್ಲವ ಸಂಘದಿಂದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೊಡಿ ಮರ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

ಇಂದು ಬೆಳಿಗ್ಗೆ ಬಿಸಿ ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಧ್ವಜ ಸ್ತಂಭವನ್ನು ಮೆರವಣಿಗೆಯಲ್ಲಿ ಪೊಳಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಸಂದರ್ಭದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಬಿ.ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಬಳಿ ಬಂದು ಅವರ ಆರೋಗ್ಯ ವಿಚಾರಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ತಲೆ ಸವರಿ ಪೂಜಾರಿ ಆಶೀರ್ವಾದ ಮಾಡಿದರು.

ತಿಂಗಳ ಹಿಂದೆ ಬಂಟ್ವಾಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನಾರ್ಧನ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಪೂಜಾರಿ ಆರೋಗ್ಯ ವಿಚಾರಿಸಿಲ್ಲ ಎನ್ನುವ ಅಸಮಾಧಾನ ಕಾಂಗ್ರೇಸ್ ಪಕ್ಷದಿಂದಲೇ ಕೇಳಿ ಬಂದಿತ್ತು.

ಸಂಸದ ನಳಿನ್ ಕುಮಾರ್ ಕಟೀಲ್ ಪೂಜಾರಿ ಆರೋಗ್ಯ ವಿಚಾರಿಸಿದ ಸಂದರ್ಭದಲ್ಲೇ ಸಚಿವ ರಮಾನಾಥ ರೈ ಕೂಡಾ ಪೂಜಾರಿ ಆರೋಗ್ಯ ವಿಚಾರಿಸಿದ್ದರು.

Facebook Comments

comments