ಐವನ್ ಡಿಸೋಜಾರ ಬಾಯಿಂದ ಈ ಮಾತೇ…!! ?

ಮಂಗಳೂರು, ಜೂನ್ 04 : ಮಾತನಾಡುವ ಭರಾಟೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಡವಟ್ಟು ಮಾಡಿಕೊಂಡಿದ್ದಾರೆ.

ಜೆಡಿಎಸ್ ರಾಜ್ಯಧ್ಯಕ್ಷ ವಿಶ್ವನಾಥ್ ರಾಜಿನಾಮೆ ವಿಚಾರವಾಗಿ ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರು ಅಭಿಪ್ರಾಯ ಕೇಳಿದಾಗ ವಿಶ್ವನಾಥ್ ರಾಜಿನಾಮೆ ನೀಡಿದ್ದು ಒಳ್ಳೇಯ ವಿಷಯನೇ ಅಂತಾ ಹೇಳಿದ್ದಾರೆ.

ನಂತರ ಇದು ಆಫ್ ದಿ ರೇಕಾರ್ಡ್ ಅಂತನೂ ಹೇಳಿದ್ದಾರೆ ಮುಂದುವರೆದೂ ಇದನ್ನು ಬರೆಯಬೇಡಿ ಅಂತನೂ ಐವನ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹೇಳಿ ಕೇಳಿ ಸಿದ್ದರಾಮಯ್ಯ ಅವರ ಆಪ್ತ ಹಾಗಾಗಿ ಐವನ್ ಉದ್ದೇಶ ಪೂರ್ವಕವಾಗಿ ಈ ಮಾತನ್ನು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜೆಡಿಎಸ್- ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಲ್ಲಿ ಎಲ್ಲವೂ ಸರಿಯಿಲ್ಲ ಎಂಬುವುದು ಸ್ಪಷ್ಟವಾಗಿದೆ.

ಹೇಳಿ ಕೇಳಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ವಿಶ್ವನಾಥ್ ಒಂದು ಇತ್ತೀಚಿಗಿನ ವರೆಗೂ ಕಾಂಗ್ರೆಸ್ಸಿನಲ್ಲುದು, ಸಂಸದ, ಸಚಿವನಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದು, ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆಗಳು ಸರಿ ಕಾಣದೇ ಪಕ್ಷಕ್ಕೆ ರಾಜಿನಾಮೇ ನೀಡಿ ಜೆಡಿಎಸ್ ಸೇರಿದ್ದರು.

ವಿಡಿಯೋಗಾಗಿ…

Facebook Comments

comments