ಪುತ್ತೂರು, ಆಗಸ್ಟ್ 18 : ಚಲಿಸುತ್ತಿದ್ದ ಟ್ಯಾಂಕರ್  ಚಾಲಕನ ‌ ಕಾಲಿಗೆ  ನಾಗರ ಹಾವೊಂದು ಸುತ್ತಿಕೊಂಡ  ಘಟನೆ ಮಂಗಳೂರು ಬೆಂಗಳೂರು  ರಾಷ್ಟ್ರೀಯ  ಹೆದ್ದಾರಿಯಲ್ಲಿ  75 ರಲ್ಲಿ  ನಡೆದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಈ ಘಟನೆ ಸಂಭವಿಸಿದ್ದು, ಢೀಡಿರನೇ ಹಾವು ಕಂಡು ಹೌಹಾರಿದ ಟ್ಯಾಂಕರ್ ಚಾಲಕ ಏಕಾಎಕಿ ಬ್ರೇಕ್ ಹಾಕಿ ಹೆದ್ದಾರಿ ಮಧ್ಯದಲ್ಲೇ ಟ್ಯಾಂಕರ್ ನಿಲ್ಲಿಸಿ ಕೆಳಗಡೆ ಹಾರಿದ್ದಾನೆ. ಇದರಿಂದ ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೆ ತೊಂದರೆ ಆಯಿತು.  ಟ್ಯಾಂಕರಿನ  ಇಂಜಿನಿನ ಒಳಗಡೆ ಅವಿತುಕೊಂಡಿದ್ದ ನಾಗರಾಜನನ್ನು ಹಿಡಿಯಲು ಉರಗತಜ್ಞರಿಗೆ ಬುಲಾವ್ ಹೋಯಿತು. ಸುಮಾರು ಒಂದು ಗಂಟೆಗಳ ಕಾಲ ಅವಿರತ ಶ್ರಮದ ಮತ್ತು ಸಾಹಸದಿಂದ ನಾಗರ ಹಾವನ್ನು ಹಿಡಿಯಲು ಉರಗತಜ್ಞರು ಯಶಸ್ವಿಯಾಗಿದ್ದಾರೆ. ಹಿಡಿದ ನಾಗರ ಹಾವನ್ನು ದೂರದ ಅಭಯ ಅರಣ್ಯದ ಸುಕ್ಷಿತ ಸ್ಥಳಕ್ಕೆ ಕೊಂಡು ಹೋಗಿ ಬಿಡಲಾಯಿತು.

ಚಾಲಕನ ಸಮಯ ಪ್ರಜ್ಞೆ ಸಾರ್ವಜನಿಕರ ಮೆಚ್ಚುಗಗೆ ಪಾತ್ರವಾಗಿದೆ. ಒಂದು ವೇಳೆ ಚಾಲಕ ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರಿ ಅನಾಹುತ ಸಂಭವಿಸುತ್ತಿತ್ತು.

ವಿಡಿಯೋಗಾಗಿ ಲಿಂಕನ್ನು ಒತ್ತಿರಿ..

Facebook Comments

comments