DAKSHINA KANNADA
ಗೋಭಕ್ಷಕರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಸರಕಾರ ಮಾಡಲಿ-ಹಿಂದೂ ಜಾಗರಣ ವೇದಿಕೆ
ಗೋಭಕ್ಷಕರಿಗೆ ಪರ್ಯಾಯವಾಗಿ ಹಂದಿ ಮಾಂಸದ ವ್ಯವಸ್ಥೆ ಸರಕಾರ ಮಾಡಲಿ-ಹಿಂದೂ ಜಾಗರಣ ವೇದಿಕೆ
ಪುತ್ತೂರು,ಎಪ್ರಿಲ್ 3 : ಗೋಮಾಂಸವನ್ನು ಸೇವಿಸುವ ಜನರಿಗೆ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡುವ ಬಗ್ಗೆ ಯೋಚಿಸಬೇಕಿದ್ದು, ಗೋಭಕ್ಷಕ ಪ್ರತಿ ಕುಟುಂಬಕ್ಕೂ ನಾಲ್ಕು ಹಂದಿಗಳನ್ನು ಸಾಕಲು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳನ್ನು ಹಟ್ಟಿಯಿಂದ ತಲವಾರು ಝಳಪಿಸಿ ರಾಜಾರೋಷವಾಗಿ ಸಾಗಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ.
ಇದಕ್ಕೆ ಬೆಂಬಲ ಸೂಚಿಸುವ ರಾಜಕೀಯ ಪಕ್ಷಗಳು , ಬುದ್ಧಿಜೀವಿಗಳೂ ಸಾಕಷ್ಟು ಜನರಿದ್ದು, ಇವರೆಲ್ಲಾ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.
ಗೋವು ಹಿಂದೂಗಳ ಶ್ರದ್ಧೆಯ ವಿಚಾರವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮುಂದೆ ಅಧಿಕಾರಕ್ಕೆ ಬರುವ ಪಕ್ಷಗಳ ಅಭ್ಯರ್ಥಿಗಳು ಹಾಗೂ ಸರಕಾರ ಗೋಹತ್ಯೆಯನ್ನು ನಿಶೇಧ ಮಾಡಬೇಕು.
ಗೋಭಕ್ಷಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಮಾಡಬೇಕಿದೆ.
ಈ ಕಾರಣಕ್ಕಾಗಿ ಯಾರೆಲ್ಲಾ ಗೋ ಭಕ್ಷಣೆ ಮಾಡುತ್ತಾರೋ ಅಂಥಹ ಕುಟುಂಬಗಳಿಗೆ ಸರಕಾರದ ವತಿಯಿಂದಲೇ ನಾಲ್ಕು ಹಂದಿಗಳನ್ನು ನೀಡಿ ಅದನ್ನು ಸಾಕುವ ವ್ಯವಸ್ಥೆಯನ್ನೂ ಸರಕಾರದಿಂದಲೇ ಮಾಡಬೇಕೆಂದು ಅವರು ಆಗ್ರಹಿಸಿದರು.
ಮಂಗಳೂರಿನ ಕೈರಂಗಳದ ಗೋ ಶಾಲೆಯಿಂದ ಗೋವುಗಳನ್ನು ಕದ್ದ ಗೋ ಕಳ್ಳರನ್ನು ಎರಡು ದಿನಗಳ ಒಳಗೆ ಪೋಲೀಸರು ಹಿಡಿಯದೇ ಹೋದಲ್ಲಿ ಜಿಲ್ಲೆಯಾದ್ಯಂತ ವಿವಿಧ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
You must be logged in to post a comment Login